ಕುಮಾರಸ್ವಾಮಿ, ಸಿದ್ದುಗೆ ವಯಸ್ಸಾಗಿದೆ ಯಾರ ಬಗ್ಗೆ ಏನ್ ಮಾತಾಡಬೇಕು ಪರಿಜ್ಞಾನ ಇಲ್ಲ: ಸಚಿವ ಪ್ರಭು ಚವ್ಹಾಣ್
ಕಲಬುರಗಿ: ಕುಮಾರಸ್ವಾಮಿ ಹಾಗೂ ಸಿದ್ದುಗೆ ವಯಸ್ಸಾಗಿದೆ. ಯಾರ ಬಗ್ಗೆ ಹೇಗೆ ಮಾತಾಡಬೇಕು ಅನ್ನೋ ಪರಿಜ್ಞಾನ ಕಳೆದುಕೊಂಡಿದ್ದಾರೆ ಅಂತ ಮಾಜಿ ಸಿಎಂಗಳ ವಿರುದ್ಧ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಗುಡುಗಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಾಯಕರ ಟೀಕಾಪ್ರಹಾರ ಕುರಿತು ಪ್ರತಿಕ್ರಿಯಿಸಿದರು. ಆರ್ ಎಸ್ ಎಸ್ ಇದ್ರೆ ದೇಶ ಇರುತ್ತೆ. ಕುಮಾರಸ್ವಾಮಿ, ಸಿದ್ದರಾಮಯ್ಯ ವಯಸ್ಸಾಗಿದೆ ಯಾವ ರೀತಿ ಮಾತಾಡಬೇಕು ಅಂತಾ ಗೊತ್ತಿಲ್ಲ. ಕುಮಾರಸ್ವಾಮಿ ಸಿದ್ದರಾಮಯ್ಯ ಹೇಳಿಕೆ ಖಂಡಿಸ್ತೇನೆ ಅಂತ ಹೇಳಿದರು.
2014 ರ ಮೊದಲು ದೇಶಕ್ಕೆ ಏನ್ ಬೆಲೆ ಇತ್ತು, ಇವಾಗ ಏನ್ ಬೇಲೆ ಇದೆ ಅಂತಾ ಎಲ್ಲರಿಗೂ ಗೊತ್ತಿದೆ. ವಿದೇಶದಲ್ಲಿ ಸಹ ಪ್ರಧಾನಿ ಮೋದಿಗೆ ಯಾವ ರೀತಿ ಪ್ರಶಂಸನೆ ಸಿಗುತ್ತಿದೆ ಅಂತಾ ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಪ್ರಭು ಚವ್ಹಾಣ್ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ತೀರುಗೇಟು ನೀಡಿದರು.
ಇನ್ನು ಸಿಂಧಗಿ ಹಾನಗಲ್ ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವದು ಖಚಿತ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೊಡುಗೆ ಹಾಗೂ ಬಸವರಾಜ ಬೊಮ್ಮಾಯಿ ಅವರ ಒಳ್ಳೆಯ ಕೆಲಸಗಳಿಂದ ನಾವು ಎರಡು ಉಪಚುನಾವಣೆಯಲ್ಲಿ ಸಲಿಸಾಗಿ ಗೆಲುತ್ತೆವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೆ ವೇಳೆ ಐಟಿ ದಾಳಿ ಕುರಿತು ಮಾತನಾಡಿದ ಅವರು, ಐಟಿ ದಾಳಿ ಕಾಮನ್, ಇದು ಹೊಸದೇನಲ್ಲ. ಕಾನೂನು ಎಲ್ಲರಿಗೂ ಒಂದೆ ತನಿಖೆ ನಡೆಯುತ್ತಿದೆ. ತನಿಖೆಯ ನತಂರ ಧೂಧ್ ಕಾ ದೂಧ್ ಪಾನಿ ಕಾ ಪಾನಿ ಯಾಗಲಿದೆ ಎಂದರು.