ಕೋಲಾರ ಜಿಲ್ಲೆಯ ಅಂತರ್ ಜಲ ವೃದ್ದಿಗೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಸಂತಸ
ಕೋಲಾರ: ಕೆ ಸಿ ವ್ಯಾಲಿ ಸಂಸ್ಕರಿಸಿದ ನೀರನ್ನು ಕೋಲಾರದ ಕೆರೆಗಳಿಗೆ ಹರಿಸಿದ ಕಾರಣ ಅಂತರ್ ಜಲ ಅನುಕೂಲವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುವಾಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಸಣ್ಣ ನೀರಾವರಿ ಅಂತರ್ ಜಲ ಅಭಿವೃದ್ದಿ ಇಲಾಖೆ ಮತ್ತು ಅಂತರ್ ಜಲ ನಿರ್ದೇಶನಾಲಯ ಸಿದ್ದಪಡಿಸಿರುವ ಕರ್ನಾಟಕ ರಾಜ್ಯದ ಅಂತರ್ ಜಲ ಮೌಲ್ಯೀಕರಣದ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಅಂತರ್ ಜಲ ಭೂಮಿಯ ತಲಮಟ್ಟದ ಮುನ್ನೂರು ಅಡಿ ಒಳಗೆ ದೊರೆಯುತ್ತಿದ್ದು ಆದರೆ ಅತಿಯಾದ ಅಂತರ್ ಜಲ ಬಳಕೆಯಿಂದ ಕೋಲಾರ ಜಿಲ್ಲೆಯಲ್ಲಿ ನೀರು ಪಾತಾಳಕ್ಕೆ ತಲುಪಿದೆ ಅಂತರ್ ಜಲ ಮರುಪೂರ್ಣ ಮತ್ತು ಉಳಿಸಲು ಅಟಲ್ ಭೂ ಜಲ ಯೋಜನೆಯನ್ನು ಅನುಷ್ಟಾನ ಮಾಡಲಾಗಿದೆ ಎಂದರು.
ಕೆ ಸಿ ವ್ಯಾಲಿ ಸಂಸ್ಕರಿಸಿದ ನೀರನ್ನು ಕೋಲಾರದ ಕೆರೆಗಳಿಗೆ ಹರಿಸಿದ ನಂತರ ಅಂತರ್ ಜಲ ಮಟ್ಟ 300 ರಿಂದ 400 ಅಡಿಗೆ ಏರಿಕೆಯಾಗಿದೆ ಇದರಿಂದ ಕೊಳವೆ ಬಾವಿ ಕೊರೆಯುವುದು ಮತ್ತು ಪಂಪ್ ಸೆಟ್ ಅಳವಡಿಸುವ ವೆಚ್ಚ ಉಳಿತಾಯವಾಗಲಿದೆ. ನೀರನ್ನು ಪಂಪ್ ಸೆಟ್ ಮೂಲಕ ಮೇಲೆ ಎತ್ತಬಹುದಾಗಿದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಅಂತರ್ ಜಲದ ಮಟ್ಟ 300 ರಿಂದ 400 ಅಡಿ ಮೇಲೆ ಬರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.