Uncategorized

ಖರ್ಗೆ ಕ್ಷಮೆ ಕೇಳಿದ್ರೆ ಅವರ ಗೌರವ ಮತ್ತಷ್ಟು ಹೆಚ್ಚಾಗಲಿದೆ: ಸಚಿವ ಈಶ್ವರಪ್ಪ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಒಬ್ಬ ಚಿಲ್ಲರೆ ವ್ಯಕ್ತಿ ಅಂತ ಹೇಳಿದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಬಾಯ್ತಪ್ಪಿನಿಂದ ಹೇಳಿದ್ರೆ ಕ್ಷಮೆಯಾಚಿಸಲಿ. ಇಲ್ಲಾಂದ್ರೆ‌ ಚಿಲ್ಲರೆ ಎಂಬುವದರ ಬಗ್ಗೆ ವಿವರಣೆ ಕೊಡಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಖರ್ಗೆ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸಿದರು. ಖರ್ಗೆ ಅವರ ಮೇಲೆ ತುಂಬ ಗೌರವ ಇದೆ. ಮೋದಿ ವಿರುದ್ಧ ಖರ್ಗೆ ಹೀಗೆ ಮಾತಾಡಿದ್ದು ನನಗೆ ಅತ್ಯಂತ ನೋವಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಎಂದು ಸಹ ಇಷ್ಟು ಬೇಸರವಾಗಿರಲಿಲ್ಲ. ಆದರೆ ವಿಶ್ವವೇ ಮೆಚ್ಚಿದ ನಾಯಕನ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೇ ಮಾತಾಡಬಾರದಿತ್ತು. ಖರ್ಗೆಯವರ ಮಾತು ಅವರಿಗೆ ಸರಿಯನಿಸಿದ್ರೆ ನಾ ಏನು ಹೇಳಲ್ಲ ಎಂದ ಈಶ್ವರಪ್ಪ, ಖರ್ಗೆ ಅವರು ಕ್ಷಮೆ ಕೇಳಿದ್ರೆ ಅವರ ಗೌರವ ಮತ್ತಷ್ಟು ಹೆಚ್ಚಾಗಲಿದೆ. ದೇಶದ ಆಸ್ತಿ ಮೋದಿ ಮಾರಲ್ಲ, ದೇಶದ ಆಸ್ತಿಯೇ ನರೇಂದ್ರ ಮೋದಿಯಾಗಿದ್ದಾರೆ ಎಂದರು.

ದೇಶದಲ್ಲಿ ಕಾಂಗ್ರೆಸ್ ಪಿಸ್ ಪಿಸ್ ಆಗುತ್ತೆ:

ಬಿಜೆಪಿಯ ಶಾಸಕರುಗಳು ಸಿಂಹ ಇದ್ದಾಗೆ, ನಮ್ಮ ಶಾಸಕರು ಮಾರಾಟದ ವಸ್ತುಗಳಲ್ಲ. ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. 40 ಅಲ್ಲ, 4 ಜನ ಶಾಸಕರನ್ನು ಕಾಂಗ್ರೆಸ್ ಪಕ್ಷ ಸೆಳೆಯಲಿ ನೋಡೊಣ ಎಂದು ಸಮಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಲಿ. ಈ ಹಿಂದೆ ಮಾಡಿದ ಕೆಲಸಗಳ ಬಗ್ಗೆ ಪಟ್ಟಿ ಕೊಡಲಿ, ನಂತರ ನಾವು ಕೊಡ್ತಿವಿ. ಅನೇಕ ರಾಷ್ಟ್ರಗಳ‌ ಮುಸ್ಲಿಂಮರು ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ. ಜೆಡಿಎಸ್‌ ಪಕ್ಷ ಮುಸ್ಲಿಂರನ್ನ ಚುನಾವಣೆಗೆ ನಿಲ್ಲಿಸಿದ್ರೆ ಕಾಂಗ್ರೆಸ್‌ಗೆ ಭಯವಾಗುತ್ತೆ ಎಂದು ಕುಟುಕಿದ್ದಾರೆ‌.

Related Articles

Leave a Reply

Your email address will not be published.

Back to top button