ಐಟಿ ದಾಳಿ ಕಾಂಗ್ರೆಸ್ ನವರ ಮೇಲೆ ಮಾಡುತ್ತಾರೆ ಅಂತಿದ್ರು- ಈಗ ಕಾಂಗ್ರೆಸ್ ನವರು ಯಾಕೆ ಬಾಯಿ ಬಿಡ್ತಿಲ್ಲ: ಸಚಿವ ಈಶ್ವರಪ್ಪ
ಬಾಗಲಕೋಟೆ: ಐಟಿ ದಾಳಿ ನಡೆದಾಗ ಕಾಂಗ್ರೆಸ್ ನವರು ಕೇವಲ ಕಾಂಗ್ರೆಸ್ ನವರ ಮೇಲೆ ಮಾಡ್ತಾರೆ ಎಂದು ಹೇಳುತ್ತಿದ್ದರು. ಈಗ ಯಾಕೆ ಕಾಂಗ್ರೆಸ್ ನವರು ಬಾಯಿ ಬಿಡ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ ಕಾಂಗ್ರೆಸ್ ಮೇಲಲ್ಲ, ಯಾರರ ಮೇಲೆ ಅನುಮಾನ ಇದೆ ಅವರ ಮೇಲೆ ಐಟಿ ದಾಳಿ ಮಾಡುತ್ತಾರೆ ಎಂದು ಕಾಂಗ್ರೆಸ್ ನವರು ಹೇಳಬೇಕಲ್ವ? ತಪ್ಪಿತಸ್ಥರು ಯಾರಿದಾರೆ ಅವರ ಮೇಲೆ ಕ್ರಮ ಕೈಗೊಳ್ಳತಾರೆ, ಇಲ್ಲಂದ್ರೆ ಇಲ್ಲ. ಕಾಂಗ್ರೆಸ್ನವರ ಮೇಲೆ ಗುರಿ ಇಟ್ಟು ಐಟಿ ದಾಳಿ ಮಾಡ್ತಿದ್ರು ಎಂದು ನಾವು ಹೇಳ್ತಿದ್ದು ತಪ್ಪು ಅಂತಾ ಹೇಳಿ ರಾಜ್ಯದ ಜನರ ಮುಂದೆ ಕಾಂಗ್ರೆಸ್ನವರು ಕ್ಷಮೆ ಕೇಳಬೇಕು ಎಂದರು.
ಈ ರೀತಿ ಒಂದು ಸಂಸ್ಥೆ ಮೇಲೆ ರಾಜಕಾರಣದ ಸಂಶಯ ಮಾಡುತ್ತಾ ಹೋದರೆ. ನಾಳೆ ದೇಶದಲ್ಲಿ ಐಟಿ, ಸಿಬಿಐ ಬಗ್ಗೆ ಜನರಿಗೆ ವಿಶ್ವಾಸ ಬರೋಕೆ ಸಾಧ್ಯನಾ? ಕಾಂಗ್ರೆಸ್ ನವರ ಮೇಲೆ ಐಟಿ ದಾಳಿ ಮಾಡಿದಾಗ ನೀವು ಸತ್ಯಹರಿಶ್ಚಂದ್ರರಾ? ಆ ಸಂದರ್ಭದಲ್ಲಿ ಯಾರರ ಮೇಲೆ ಸಂಶಯ ಇತ್ತೋ ಅನುಮಾನ ಇದ್ದವರ ಮೇಲೆ ಐಟಿ ದಾಳಿ ಮಾಡಿದ್ರು.ಈಗ ಯಾರ ಮೇಲೆ ಅನುಮಾನ ಇದಿಯೋ ಅವ್ರ ಮೇಲೆ ದಾಳಿ ಮಾಡಿದ್ದಾರೆ.ಕಾಂಗ್ರೆಸ್ ನವರ ಮೇಲೆನೆ ಐಟಿ ದಾಳಿ ಮಾಡ್ತಿದ್ರು ಎಂದು ಹೇಳ್ತಿದ್ರಲ್ಲ.ಹಾಗಾಗಿ ರಾಜ್ಯದ ಜನತೆ ಮುಂದೆ ಕಾಂಗ್ರೆಸ್ ನವರು ಕ್ಷಮೆ ಕೇಳಬೇಕು ಎಂದು ತಿಳಿಸಿದರು.