Uncategorized

ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೊಲ್ಲಾ: ಸಚಿವ ಅಶ್ವತ್ಥನಾರಾಯಣ

ಮೈಸೂರು: ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ‌, ಯಾವುದೇ ಕಾರಣಕ್ಕೂ ಅಧಿಕಾರ ಮಾಡೋದೆ ಇಲ್ಲ‌ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲೇ ಒಡೆದು ನೂರು ಭಾಗವಾಗಿದೆ. ರಾಜ್ಯ ಕಾಂಗ್ರೆಸ್ ನಾಯಕತ್ವಕ್ಕೆ ಕಿತ್ತಾಟ ಶುರುವಾಗಿದೆ. ನಾನು ಬರೆದುಕೊಡ್ತೀನಿ ಯಾವ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ‌. ನಮ್ಮ ಶಾಸಕರಾರು ಕಾಂಗ್ರೆಸ್‌ಗೆ ಹೋಗಲ್ಲ ಎಂದರು.

ಹಾಸನಕ್ಕೆ ಹೋಗಿ ಕೇಳಿದ್ರು ಶೇ 65 ರಷ್ಟು ಜನ‌ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಕನಕಪುರಕ್ಕೂ ಹೋಗಿ ಕೇಳಿದ್ರು ಮೋದಿ ಹೇಸರೇಳ್ತಾರೆ. ಅಲ್ಲೆಲ್ಲೂ ಸ್ಥಳೀಯ ನಾಯಕರ ಹೆಸರೇಳಲ್ಲ‌ ಎಂದು ದಳಪತಿಗಳು ಮತ್ತು ಡಿಕೆಶಿಗೆ ಟಾಂಗ್ ಕೊಟ್ಟರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭವಿಷ್ಯವಿಲ್ಲ. ಇಲ್ಲೇನಿದ್ದರೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ, ರಾಜ್ಯದಲ್ಲಿ ಮುಂದೆ ಎಂದಿಗೂ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬರುವುದಿಲ್ಲ ಎಂಬ ನಡುಕ ಹುಟ್ಟಿದೆ. ಅದಕ್ಕೆ ಇಲ್ಲದ ಕಥೆ ಕಟ್ಟಿ‌ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಒಡೆದು ಚೂರಾಗುತ್ತಿದೆ. ಯಾರು ನಾಯಕರಾಗುತ್ತಾರೆ ಎಂಬ ಹುಡುಕಾಟ ನಡೆಯುತ್ತಿದೆ. ಈ ನಡುವೆ ನಾನು ಸಿಎಂ ಆಗುತ್ತೇನೆ, ತಾನು ಸಿಎಂ ಆಗುತ್ತೇನೆ ಅಂತ ಕೆಲವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಸಿದ್ದರಾಮಯ್ಯರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

Related Articles

Leave a Reply

Your email address will not be published.

Back to top button