ಕೆಜಿಎಫ್ ನಲ್ಲಿ ಹಳೆದ್ವೇಷದ ಹಿನ್ನಲೆ ಮಧ್ಯರಾತ್ರಿ ಗುಂಪು ಘರ್ಷಣೆ: ಓರ್ವನ ಸಾವು
ಕೋಲಾರ: ಹಳೆ ದ್ವೇಷದ ಹಿನ್ನೆಲೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಮಾರಕಾಸ್ತ್ರಗಳಿಂದ ಒರ್ವ ರೌಡಿ ಶೀಟರ್ ಕೊಲೆಯಾಗಿರುವ ಘಟನೆ ಕೆಜಿಎಫ್ ನಲ್ಲಿ ನಡೆದಿದೆ. ಜಿಲ್ಲೆಯ ಕೆಜಿಎಫ್ ನಗರದ ಇ ಟಿ ಬ್ಲಾಕ್ ನಲ್ಲಿ ಘಟನೆ ಕಳೆದ ರಾತ್ರಿ ಎರಡು ಗುಂಪುಗಳ ಮಧ್ಯೆ ಕೆಜಿಎಫ್ ಚಾಪ್ಟರ್ 2 ಮಾದರಿಯಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ಕೆಜಿಎಫ್ ಎಸ್ಪಿ ಕಚೇರಿ ವರ್ಗಾವಣೆಯಾಗುತ್ತಿದ್ದಂತೆ ಮತ್ತೆ ರೌಡಿಗಳು ತಮ್ಮ ಅಟ್ಟಹಾಸ ಮುಂದುವರೆಸಿದ್ದಾರೆ.
ಗ್ಯಾಂಗ್ ವಾರ್ ನಲ್ಲಿ ಡಿ ಬ್ಲಾಕ್ ನಿವಾಸಿ ರೌಡಿ ಶೀಟರ್ ೩೮ ವರ್ಷದ ರಾಜ್ ಕುಮಾರ್ ಕೊಲೆಯಾಗಿದ್ದು, ಅಜಯ್ ಹಾಗೂ ಸರವಣ ಎಂಬುವವರು ತೀವ್ರ ಗಾಯಗಳಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಳೇ ದ್ವೇಷದ ಹಿನ್ನೆಲೆ ಲಾಂಗ್ ಹಿಡಿದು ತಡ ರಾತ್ರಿ ಗ್ಯಾಂಗ್ ವಾರ್ ನಡೆದಿದ್ದು, ಅರೋಪಿಗಳಾದ ಜಯಕಾಂತ್, ಮೆರಿಯನ್, ಲಾರೆನ್ಸ್, ಸರವಣ, ರಮೇಶ್, ವೆಂಕಟೇಶ್ ಎಂಬುವವರ ಗುಂಪಿನಿಂದ ಕೊಲೆ ಮಾಡಲಾಗಿದೆ.
ಇನ್ನೂ ಸ್ಥಳಕ್ಕೆ ಕೋಲಾರ ಎಸ್ಪಿ ಡಿ ಕಿಶೋರ್ ಬಾಬು, ಡಿವೈಎಸ್ ಪಿ ಮುರಳಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಕರಣ ಸಂಬಂಧ ಇಬ್ಬರು ಅರೋಪಿಗಳನ್ನ ಬಂಧಿಸಿದ್ದು, ತಲೆ ಮರೆಸಿಕೊಂಡ ಇನ್ನೂಲಿದ ಶ್ರೀಕಾಂತ್ ಆಂಡ್ ತಂಡವನ್ನು ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ಈ ಕೂಡಲೆ ಬಂಧಿಸುವಂತೆ ಮೃತನ ಸಂಬಂದಿಕರು ಒತ್ತಾಯ ಮಾಡಿದ್ದಾರೆ.
ಒಟ್ಟಾರೆ ಕೆಜಿಎಫ್ ಎಸ್ಪಿ ಸ್ಥಳಾಂತರ ಸುದ್ದಿ ತಿಳಿಯುತ್ತಿದ್ದಂತೆ ಪುಡಿ ರೌಡಿಗಳು ತಮ್ಮ ಅಟ್ಟಹಾಸ ಮೆರೆಯಲು ಮುಂದಾಗಿದ್ದಾರೆ.