Uncategorized

ಮೈಸೂರಿನ ಶಕ್ತಿಧಾಮಕ್ಕೆ ಆಧಾರ ಸ್ತಂಭವಾಗಿದ್ದ ಪುನೀತ್ ರಾಜ್‍ಕುಮಾರ್

ಮೈಸೂರು : ನಟ ಪುನೀತ್ ರಾಜ್‍ಕುಮಾರ್ ರವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕೋಟ್ಯಧಿಪತಿ ಮೊದಲ ಸರಣಿಯಲ್ಲಿ ತಾವು ಗೆದ್ದ 18 ಲಕ್ಷ ರೂ. ಹಣವನ್ನು ಮೈಸೂರಿನ ಮಹಿಳೆಯರ ಪುನರ್ವಸತಿ ಹಾಗೂ ಅಭಿವೃದ್ಧಿ ಕೇಂದ್ರಕ್ಕೆ ನೀಡಿ ಮಾನವೀಯತೆ ತೋರಿದ್ದರು ಎಂದು ಶಕ್ತಿಧಾಮದ ಸಂಚಾಲಕ ಜಿಎಸ್,ಜಯದೇವ್ ಹೇಳಿದರು.

ಮೈಸೂರಿನ ಊಟಿ ರಸ್ತೆಯಲ್ಲಿರುವ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವನ್ನು ಡಾ.ರಾಜ್​​ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್1998 ರಲ್ಲಿ ಸ್ಥಾಪನೆ ಮಾಡಿ, 2000ನೇ ಇಸ್ವಿಯಿಂದ ಈ ಶಕ್ತಿಧಾಮದಲ್ಲಿ 150ಕ್ಕೂ ಹೆಚ್ಚು ಅನಾಥ ಮತ್ತು ಬಡ ಹೆಚ್ಚು ಹೆಣ್ಣು ಮಕ್ಕಳ ಪ್ರಾಥಮಿಕ ಹಂತದಿಂದ ಇಂಜಿನಿಯರಿಂಗ್ ಹಂತದವರೆಗೆ ಶಿಕ್ಷಣವನ್ನು ನೀಡಲು ಸಹಾಯ ಮಾಡುತ್ತಿದ್ದರು. ಜೊತೆಗೆ ಸಂತ್ರಸ್ತ ಮಹಿಳೆಯರಿಗೆ ಆಶ್ರಯದ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಸಹ ಈ ಸಂಸ್ಥೆ ನೀಡುತ್ತಿತ್ತು. ಈ ಶಕ್ತಿಧಾಮ ಕೇಂದ್ರಕ್ಕೆ ಈಗ ಗೀತಾ ಶಿವರಾಜ್ ಕುಮಾರ್ ಅಧ್ಯಕ್ಷರಾಗಿದ್ದಾರೆ.

ಕನ್ನಡದ ಕೋಟ್ಯಧಿಪತಿ ಮೊದಲ ಸರಣಿಯನ್ನು ನಟ ರಮೇಶ್​ ಅರವಿಂದ್​ ನಡೆಸಿಕೊಡುತ್ತಿದ್ದರು. ಈ ಸಂದರ್ಭ ಪುನೀತ್​ ಭಾಗವಹಿಸಿ 18 ಲಕ್ಷ ರೂ. ಹಣವನ್ನು ಗೆದ್ದಿದ್ದರು. ಈ ಹಣವನ್ನು ಅಪ್ಪು ಶಕ್ತಿಧಾಮಕ್ಕೆ ನೀಡಿ ಮಾನವೀಯತೆ ಮೆರೆದಿದ್ದರು. ಆದರೆ, ಈ ವಿಚಾರ ಎಲ್ಲೂ ಪ್ರಚಾರ ಆಗದಂತೆ ಹಣ ನೀಡಿ ಹೋಗಿದ್ದರು.

ಜೊತೆಗೆ ಡಾ.ರಾಜ್‍ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್ ಹಾಗೂ ತಮ್ಮ ಹುಟ್ಟು ಹಬ್ಬವನ್ನು ಈ ಶಕ್ತಿಧಾಮದಲ್ಲಿ ಆಚರಿಸುತ್ತಿದ್ದರು. ಮುಖ್ಯವಾಗಿ ಈ ಶಕ್ತಿಧಾಮದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದರು. ಈ ಶಕ್ತಿಧಾಮದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಊಟದ ಮನೆ ಹಾಗೂ ಗ್ರಂಥಾಲಯ ಕಟ್ಟಡಗಳ ಉದ್ಘಾಟನೆಗೆ ಆಗಮಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಇಲ್ಲಿನ ವಿದ್ಯಾರ್ಥಿಗಳಿಗೆ ಅವರ ಸಾವು ನಂಬಲು ಸಾಧ್ಯವಾಗುತ್ತಿಲ್ಲ.

ಪುನೀತ್ ರಾಜ್ ಕುಮಾರ್ ಶಕ್ತಿಧಾಮಕ್ಕೆ ಬೆನ್ನೆಲೆಬಾಗಿದ್ದರು. ಶಕ್ತಿಧಾಮ ಡಾ. ರಾಜ್ ಕುಟುಂಬದ ಕನಸಾಗಿತ್ತು. ಅನಾಥ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರವಾದ ಶಕ್ತಿಧಾಮಕ್ಕೆ ಪುನೀತ್ ರಾಜ್ ಕುಮಾರ್ ಸಂಪೂರ್ಣ ಸಹಕಾರ ನೀಡುತ್ತಿದರು ಎಂದು ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್ ಭಾವುಕ‌ರಾದರು.

ಪ್ರತೀ ವರ್ಷ ಮಕ್ಕಳಿಗೆ ಪುಸ್ತಕ ಹಾಗೂ ಇತರ ಅಗತ್ಯತ ವಸ್ತುಗಳನ್ನ ಪೂರೈಸುತ್ತಿದ್ದರು. ಶಕ್ತಿಧಾಮಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಲು ಯೋಜನೆ ರೂಪಿಸಿದ್ದು, ಸುಮಾರು 8 ಕೋಟಿ ವೆಚ್ಚದಲ್ಲಿ ಶಾಲೆ ನಿರ್ಮಾಣಕ್ಕೆ ಕನಸಾಗಿತ್ತು. ಈ ವರ್ಷ ಕೋವಿಡ್ ಗೆ ಮುನ್ನ ಶಕ್ತಿಧಾಮಕ್ಕೆ ಬಂದು ಬಹಳ ಹೊತ್ತು ಮಕ್ಕಳೊಂದಿಗೆ ಸಮಯ ಕಳೆದಿದ್ದರು ಎಂದರು.

ಇತ್ತೀಚಿನ ದಿನಗಳಲ್ಲಿ ಪುನೀತ್ ಶಿಕ್ಷಣದ ಬಗ್ಗೆ ಹೆಚ್ಚು ಮಾತನಾಡ್ತಿದ್ರು. ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಊಟ ಮಾಡೋದಂದ್ರೆ ಅವರಿಗೆ ಬಲು ಇಷ್ಟ. ಮಕ್ಕಳಿಗೆ ಒಳ್ಳೆಯ ಕಡೆ ಊಟ ತರಿಸಿ ಅವರೂ ಊಟ ಮಾಡ್ತಿದ್ರು. ಶಿವಣ್ಣ ಅವರೂ ಕೂಡ ಪುನೀತ್ ರ ಯೋಜನೆಗಳಿಗೆ ಕೈಜೋಡಿಸಿದ್ರು. ಶಕ್ತಿಧಾಮದ ಸಲುವಾಗಿ ವಿದೇಶಕ್ಕೆ ಹೋಗಿ ಬರಲು ತಯಾರಿ ಮಾಡ್ತಿದ್ರು
ಕನ್ನಡದ ಬೇರೆ ಬೇರೆ ನಟ ಸಹಕಾರ ಪಡೆದು ಶಕ್ತಿಧಾಮಕ್ಕೆ ನೆರವಾಗಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ರು. ಪುನೀತ್ ರ ಅಗಲಿಕೆ ಶಕ್ತಿಧಾಮ‌ ಹಾಗೂ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಜಯದೇವ್ ಭಾವುಕರಾದರು.

Related Articles

Leave a Reply

Your email address will not be published.

Back to top button