Uncategorized

ಲವ್‌ ಮ್ಯಾರೇಜ್ ಆಗಿ ಮೂರೇ ತಿಂಗಳಲ್ಲಿ ಯುವತಿ ಸಾವು

ಕಲಬುರಗಿ: ಪ್ರೀತಿಸಿ ಮದುವೆಯಾದ ನವವಿವಾಹಿತೆ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಗರದ ರಾಜಾಪುರ ಬಡಾವಣೆಯಲ್ಲಿ ನಡೆದಿದೆ.

ರಮಾಬಾಯಿ (23) ಅನುಮಾನಸ್ಪದ ರೀತಿಯಲ್ಲಿ ಶವ ಪತ್ತೆಯಾದ ನವ ವಿವಾಹಿತೆ. ಮದುವೆಯಾದ ಮೂರೇ ತಿಂಗಳಿಗೆ ರಮಾಬಾಯಿ ಶವವಾಗಿ ಪತ್ತೆಯಾಗಿದ್ದಾಳೆ.

ರಾಹುಲ್ ಹಾಗೂ ರಮಾಬಾಯಿ ಪರಸ್ಪರ ಪ್ರೀತಿ ಮಾಡಿ, ಮೂರು ತಿಂಗಳ ಹಿಂದಷ್ಟೆ ಇಬ್ಬರು ಮನೆಬಿಟ್ಟು ಓಡಿಹೋಗಿ ಮದುವೆ ಆಗಿದ್ದರು. ನಂತರ ರಮಾಬಾಯಿಯನ್ನು ರಾಜಾಪೂರ ಬಡಾವಣೆಯಲ್ಲಿರುವ ತಮ್ಮ‌ ಮನೆಗೆ ರಾಹುಲ್ ಕರೆದುಕೊಂಡು ಬಂದು ಜೀವನ ನಡೆಸುತ್ತಿದ್ದ. ಆದ್ರೆ ಮದುವೆಯ ಬಳಿಕ ಗಂಡನ ಮನೆಯವರಿಂದ ನಿತ್ಯವು ಜಾತಿ ನಿಂದನೆ, ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದರಿಂದ ರಮಾಬಾಯಿ ಮಾನಸಿಕವಾಗಿ ನೊಂದಿದ್ದಳು. ನಿನ್ನೆ ಸಂಜೆ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾದ್ದಾಳೆ. ಗಂಡನ ಮನೆಯವರೇ ಕೊಲೆ ಮಾಡಿರೋದಾಗಿ ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆ ನಂತರವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ‌.

Related Articles

Leave a Reply

Your email address will not be published.

Back to top button