Uncategorized

ಕಲಬುರಗಿ: 340 ಕೆಜಿ ಗಾಂಜಾ ಜಪ್ತಿ, ಮೂವರ ಬಂಧನ

ಕಲಬುರಗಿ: ಜಿಲ್ಲೆಯ ಪೊಲೀಸರು ಬರ್ಜರಿ ಕಾರ್ಯಚರಣೆ ಮಾಡಿದ್ದು, ಅಂದಾಜು 50 ಲಕ್ಷ ಮೌಲ್ಯದ 340 ಕೆಜಿ ಗಾಂಜಾ‌ ಜಪ್ತಿ ಪಡೆಸಿಕೊಂಡಿದ್ದಾರೆ.

ಕಲಬುರಗಿ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುವಾಗ ಪೊಲೀಸರನ್ನು ಕಂಡು ಟಾಟಾ ಎಎಸ್ ಗೂಡ್ಸ್ ವಾಹನ ಅತಿ ವೇಗವಾಗಿ ತೆರಳಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಬೆನ್ನಟ್ಟಿ ಉಪಳಾಂವ ಕ್ರಾಸ್ ಬಳಿ ಗೂಡ್ಸ್ ವಾಹನ ವಶಕ್ಕೆ ಪಡೆದು ಪರೀಶಿಲನೆ ಮಾಡಿದಾಗ ಹಿಂದೆ ತಗಡಿನ ಸೆಡ್ ನಿಂದ ಪ್ರತೇಕ ಗಾಂಜಾ ಇಡಲು ವ್ಯವಸ್ಥೆ ಮಾಡಿದ್ದನ್ನು ಪತ್ತೆ ಹಚ್ಚಿ ಅದರ ಒಳಗಿದ್ದ 170 ಪೊಟ್ಟಣಗಳಲ್ಲಿ ಅಂದಾಜು 340 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಬೆನ್ನಟ್ಟಿರುವದನ್ನು ಕಂಡು ಓರ್ವ ಪರಾರಿಯಾಗಿದ್ದು, ಮೂರು ಜನರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಲಾತೂರ ಮೂಲದ ಅಕ್ರಂ ಇಮಾನದಾರ್ (22), ಸುಮೇರ್ ಇನಾಮದಾರ್ (21) ಹಾಗೂ ಬೀದರ್ ಮೂಲದ ಮೋಹನ ಮೇತ್ರೆ (32) ಮೂವರು ಬಂಧಿತ ಆರೋಪಿಗಳು. ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಕರ್ನಾಟಕಕ್ಕೆ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದರ ಹಿಂದೆ ದೊಡ್ಡ ಜಾಲ ಇರುವ ಸಾಧ್ಯತೆ ಇದೆ. ಸದ್ಯ ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published.

Back to top button