ಮೈ ಝಲ್ ಎನಿಸುತ್ತೆ ಮರಿಬನ್ನಿ ಆಚರಣೆ…!
ದಾವಣಗೆರೆ: ಈ ಆಚರಣೆ ನೋಡಿದ್ರೆ ಮೈಝಲ್ ಎನಿಸುವಂತೆ. ಹೌದು. ಇಂಥ ಆಚರಣೆ ನಡೆದಿರೋದು ದಾವಣಗೆರೆ ಜಿಲ್ಲೆಯಲ್ಲಿ. ಮರಿಬನ್ನಿ ಹಬ್ಬ ಆಚರಣೆ ದೃಶ್ಯಾವಳಿ ವೀಕ್ಷಿಸಿದರೆ ನಡುಕ ಉಂಟಾಗೋದು ಗ್ಯಾರಂಟಿ.
ಮರಿಬನ್ನಿಗೆ ದೇವರ ಪಲ್ಲಕ್ಕಿ ಹೊತ್ತು ಭಕ್ತರು ಬೆಟ್ಟ ಹತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನ ಬಾವಿಯಲ್ಲಿ ಈ ಆಚರಣೆ ನಡೆದಿದೆ. ಮೈಸೂರು ದಸರಾ ಆದ 8 ದಿನಗಳ ನಂತರ ಮಾದನಬಾವಿ ಬೆಟ್ಟದಲ್ಲಿ ಮರಿ ಬನ್ನಿ ಆಚರಣೆ ಮಾಡಲಾಗುತ್ತದೆ. ಬೀರದೇವರ ಪಲ್ಲಕ್ಕಿ ಹೆಗಲ ಮೇಲೆ ಹೊತ್ತು ಕಲ್ಲುಬಂಡೆಯನ್ನು ಭಕ್ತರು ಹತ್ತಿದ್ದಾರೆ. ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಬೆಟ್ಟವನ್ನು ಭಕ್ತರು ಹತ್ತಿದ್ದಾರೆ.
ಸ್ವಲ್ಪ ಯಾಮಾರಿದ್ರು ಅಪಾಯ ಕಟ್ಟಿಟ್ಟ ಬುತ್ತಿ. ಇಂಥ ಬೆಟ್ಟವನ್ನು ಬೀರದೇವರ ಪಲ್ಲಕ್ಕಿ ಹೆಗಲ ಮೇಲೆ ಹೊತ್ತು ಹೊತ್ತು ಹೋಗಿದ್ದಾರೆ. ಐದು ಪಲ್ಲಕ್ಕಿ ಹೊತ್ತು ಬೆಟ್ಟ ಹತ್ತಿ ಭಕ್ತರುಬಪೂಜೆ ಸಲ್ಲಿಸಿದ್ದಾರೆ.
ಅರಬಗಟ್ಟೆ, ಮಾದನಬಾವಿ ಸೇರಿ 18 ಹಳ್ಳಿಗಳಿಂದಲೂ ಮರಿಬನ್ನಿ ಹಬ್ಬ ಆಚರಣೆಗೆ ಜನರು ಬರುತ್ತಾರೆ. ಹಿಂದೆ ಬೆಟ್ಟದ ಮೇಲೆ ಪಂಚಾಯತಿಗಳು ನಡೆಯುತ್ತಿದ್ದ ಕಾರಣ ಅಲ್ಲಿ ಎಲ್ಲಾ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಮರಿ ಬನ್ನಿ ಆಚರಣೆ ಮಾಡಲಾಯಿತು.
ಆದ್ರೆ ಕೋವಿಡ್ ನಿಯಮಗಳನ್ನು ಮರೆತು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಸಾವಿರಾರು ಜನ ಸೇರಿದ್ರು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಸಾಗರದಂತೆ ಜನ ಸೇರಿದ್ದರೂ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಇತ್ತ ಗಮನಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.