Uncategorized
ಮಗುವಿಗೆ ಹಾಲುಣಿಸುವಾಗ ಪತ್ನಿಯ ಕತ್ತು ಸೀಳಿ ಕೊಂದ ಪತಿ
ಕಲಬುರಗಿ: ಪಾಪಿ ಪತಿಯೋರ್ವ ತನ್ನ ಪತ್ನಿ ಮಗುವಿಗೆ ಹಾಲುಣಿಸುವಾಗ ಆಕೆಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.
ನಸೀಮಾ ಬೇಗಂ (35) ಕೊಲೆಯಾದ ದುರ್ದೈವಿ. ಆಕೆಯ ಪತಿ ಇಬ್ರಾಹಿಂ ಎಂಬಾತನೆ ದುಷ್ಕೃತ್ಯವನ್ನು ಎಸಗಿದ್ದಾನೆ.
ತವರಿನಿಂದ ಹಣ ತರುವಂತೆ ಇಬ್ರಾಹಿಂ ತನ್ನ ಪತ್ನಿಗೆ ಪೀಡಿಸುತ್ತಿದ್ದನಂತೆ, ತವರು ಮನೆಯಿಂದ ದುಡ್ಡು ತರದ ಹಿನ್ನಲೆಯಲ್ಲಿ ಕುಡಿದು ಅಮಲಿನಲ್ಲಿ ಬಂದ ಪತಿ ತನ್ನ ಪತ್ನಿ ಮಗುಗೆ ಹಾಲು ಕುಡಿಸುವಾಗಲೇ ಮಾರಕಾಸ್ತ್ರದಿಂದ ಕತ್ತು ಸೀಳಿ ಕೊಲೆಗೈದಿದ್ದಾನೆ. ಸದ್ಯ ಆರೋಪಿ ಇಬ್ರಾಹಿಂನನ್ನ ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.