ಮುಸ್ಲಿಂ ಯುವತಿ ಹಿಂದೂ ಹುಡುಗ ಸುತ್ತಾಟ; ಹಲ್ಲೆ ಮಾಡಿದ ಮತಾಂಧರು
ಬೆಳಗಾವಿ: ಗಡಿನಾಡು ಬೆಳಗಾವಿ ಸದ್ದಿಲ್ಲದೆ ಕೋಮುವಾದಿ ರೂಪವನ್ನು ತೆಗೆದುಕೊಳ್ಳುತ್ತಾ ಸಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಅನ್ಯ ಕೋಮಿನ ಯುವಕ ಯುವತಿಯರು ಪ್ರೇಮಿಗಳು ಸ್ನೇಹಿತರು ನಿರ್ಭಿತವಾಗಿ ಸುತ್ತಾಡುವ ವಾತಾವರಣ ಇಲ್ಲವೇ ಇಲ್ಲದಂತಾಗಿದೆ.
ಸದ್ಯ ನಗರದಲ್ಲಿ ಹಿಂದೂ ಯುವಕ ಮುಸ್ಲಿಂ ಹೆಣ್ಣುಮಗಳ ಜೊತೆ ಸುತ್ತಾಟ ನಡೆಸಿದಕ್ಕೆ ಯುವಕ ಯುವತಿ ಮೇಲೆ ಮತಾಂಧ ದುಷ್ಕರ್ಮಿಗಳು ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಕೇಶ್ವರ್ ಮೂಲದ ಮುಸ್ಲಿಂ ಹೆಣ್ಣುಮಗಳು ಚಿಂಚಲಿ ಗ್ರಾಮದ ಯುವಕನ ಜೊತೆ ಸುತ್ತಾಡಲು ಬೆಳಗಾವಿ ನಗರಕ್ಕೆ ಅಗಮಿಸಿದ್ದಾಳೆ ಈ ವೇಳೆ ಎಲ್ಲಿಯಾದ್ರು ಪಾರ್ಕ್ ಗೆ ಹೋಗಬೇಕು ಎಂದುಕೊಂಡು ಆಟೋದವರನ್ನ ಕೇಳಿದ್ದಾಳೆ.
ಬುರ್ಕಾ ಹಾಕಿದ ಯುವತಿ, ಒಬ್ಬ ಹಣೆಗೆ ತಿಲಕ ಇಟ್ಟುಕೊಂಡಿದ್ದ ಹಿಂದೂ ಯುವಕನ ನೋಡಿದ್ದ ಆಟೋ ಚಾಲಕ ಇವರಿಬ್ಬರನ್ನ ಪಾರ್ಕ್ ಗೆ ಕರೆದೊಯ್ಯುವ ಬದಲು ಅಮನ್ ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸ್ನೇಹಿತರನ್ನ ಕರೆಯಿಸಿಕೊಂಡು ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಹಲ್ಲೆಗೊಳಗಾಗಿರುವ ಸಂಕೇಶ್ವರದ ಶಕಿರಾ ಬಾಯಿ ಹಾಗೂ ಚಿಂಚಲಿ ಗ್ರಾಮದ ರಾಹುಲ್ ರಾಜು ಗೋರವ ಸದ್ಯ ಮಾಳ ಮಾರುತಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ದೂರಿನಲ್ಲಿ 50 ಸಾವಿರ ಹಣ ಹಾಗೂ 20 ಸಾವಿರ ಮೌಲ್ಯದ ಫೋನ್ ನನ್ನು ಕೂಡ ಕಸಿದುಕೊಳ್ಳಲಾಗಿದೆ ಎಂದು ನಮೂದಿಸಲಾಗಿದೆ.
ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದು, ಇತರೆ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಅಲ್ಲದೆ ದೂರಿನಲ್ಲಿ ಉಲ್ಲೇಖಿಸಿರುವ ಹಣದ ವಸೂಲಿ ಕುರಿತು ಗುಮಾನಿ ಎದ್ದಿದ್ದು ಬಂಧಿತ ಆರೋಪಿ ಹೇಳುವಂತೆ ಯಾವುದೇ ಹಣ ಕಿತ್ತುಕೊಂಡಿಲ್ಲ ಎಂದು ಹೇಳಾಗುತ್ತಿದೆ.