Uncategorized
Leopard: ಕೋಳಿ ತಿನ್ನಲು ಶೆಡ್ ಗೆ ಬಂದ ಚಿರತೆ ಸೆರೆ
ಮೈಸೂರು: ಕೋಳಿ ತಿನ್ನಲು ಬಂದು ಕೋಳಿಫಾರಂನ ಶೆಡ್ ನೊಳಗೆ ನುಗ್ಗಿದ್ದ ಚಿರತೆಯನ್ನ ಅರಣ್ಯ ಇಲಾಖೆ ಸೆರೆ ಹಿಡಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ತಡರಾತ್ರಿ ಫಾರಂ ಹೌಸ್ನಲ್ಲಿ ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆಯೊಂದು ಬಂಧಿಯಾಗಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ಚಿರತೆಯನ್ನ ಸೆರೆ ಹಿಡಿದಿದ್ದಾರೆ.
ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿದಿದೆ. ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆ ಸೆರೆ ಹಿಡಿದಿದ್ದಾರೆ. ಅಕ್ಕಪಕ್ಕದ ಗ್ರಾಮಗಳಲ್ಲಿ ಉಪಟಳ ನೀಡುತ್ತಿತ್ತು. ಈಗ ಚಿರತೆಯನ್ನು ಅರಣ್ಯಕ್ಕೆ ಬಿಡಲಿದ್ದಾರೆ.