Uncategorized

ಲಕ್ಯಾ–ದಾಸರಹಳ್ಳಿ ಕೆರೆ ಏತ ನೀರಾವರಿ ಯೋಜನೆ ವರ್ಷಾಂತ್ಯಕ್ಕೆ ಪೂರ್ಣ: ಮಾಧುಸ್ವಾಮಿ

ಚಿಕ್ಕಮಗಳೂರು: ಹಿರೇಮಗಳೂರು ಕೆರೆಯಿಂದ ಲಕ್ಯಾ ಮಾದರಸನ ಕೆರೆ ಮತ್ತು ದಾಸರಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಕಾಮಗಾರಿ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ತಿಳಿಸಿದರು.

ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಹಿತಿ ನೀಡಿದರು. ಬೆಳವಾಡಿ ಕೆರೆ ಸೇರಿದಂತೆ ಒಟ್ಟು ಮೂರು ಕೆರೆಗಳಿಗೆ ನೀರು ತುಂಬಿಸುವ ಕರಗಡ ಯೋಜನೆ ಹಂತ 1 ಮತ್ತು 2 ಎಂದು ವಿಂಗಡಿಸಲಾಗಿದೆ. ಮುಂದೆ ನಾಲೆ ಕುಸಿದರೆ ಪೈಪ್ಲೈನ್ ಮಾಡಲು ಹಣ ಮೀಸಲಿಡಲಾಗಿದೆ ಎಂದರು.

ಕಾಲುವೆ ಮೂಲಕ ನೀರನ್ನು ಹರಿಸಲಾಗಿತ್ತು. ಕಾಲುವೆ ಮಣ್ಣು ಕುಸಿಯುವುದರ ಜೊತೆಗೆ ಗುರುತ್ವಾಕರ್ಷಣೆಯಲ್ಲಿ ನೀರು ಹರಿಯದ ಕಾರಣ ಕಾಲುವೆಯ ಅರ್ಧದಷ್ಟು ಪೈಪ್ಲೈನ್ ಅಳವಡಿಸಿ, ನೀರನ್ನು ಪಂಪ್ ಮಾಡಲಾಗುತ್ತಿದೆ ಎಂದರು.

ಕರಗಡ ಯೋಜನೆಗೆ ಒಟ್ಟು ರೂ. 9 ಕೋಟಿ ಅನುದಾನವಿದ್ದು, ಅದರಲ್ಲಿ 3 ಕೋಟಿ ಮಾತ್ರ ಖರ್ಚು ಮಾಡಿ ಪೈಪ್ಲೈನ್ ಕಾಮಗಾರಿ ಮುಗಿಸಿದ್ದೇವೆ. ಮುಂದಿನ ಆರೇಳು ತಿಂಗಳು ನೀರನ್ನು ಪೈಪ್ಲೈನ್ ಮೂಲಕ ಹರಿಸಿ ನಾಲೆಯ ದಡ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸಲಾಗುವುದು. ಫಲಕಾರಿಯಾದರೆ ಯೋಜನೆ ಪೂರ್ಣಗೊಳಿಸಲಾಗುವುದು. ಇಲ್ಲವೇ ಪೈಪ್ಲೈನ್ ಮುಂದುವರಿಸಿ ಮಣ್ಣು ಮುಚ್ಚಲಾಗುವುದು ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button