Uncategorized

ಗುಡಿ ವಿಚಾರದಲ್ಲಿ ಗದ್ದಲ; ಸುಖಾಂತ್ಯದ ನಂತರ ಗ್ರಾಮಕ್ಕೆ ಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ವರದಿ: ಮಲಿಕ್ ಬೆಳಗಲಿ

ಬೆಳಗಾವಿ: ಆಕ್ಟೊಬರ್ 20ನೆ ತಾರಿಕಿನಂದು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ರಣಕುಂಡೆ ಗ್ರಾಮದಲ್ಲಿ ಹೂಡಾ ದೇವರ ಗುಡಿ ವಿಚಾರವಾಗಿ ಗಲಾಟೆ ನಡೆದು ನಾಲ್ವರಿಗೆ ಗಾಯಗಳಾಗಿ ಅಸ್ಪತೆಗೆ ದಾಖಲಾಗಿದ್ದರು, ಆಕ್ಟೊಬರ್ 21ನೆ ತಾರಿಕಿನಂದು ಎಸಿ ಹಾಗೂ ಪಿಡಿಓ ಸಮಜಾಯಿಸಿ ನಂತರ ಜಾಗ ಪಂಚಾಯತ್ ಗೆ ಸೇರಿದ್ದು ಎಂದು ತೀರ್ಮಾನಿಸಿ ಪ್ರಕರಣವನ್ನು ಪೊಲೀಸರ ಸಮ್ಮುಖದಲ್ಲಿ ಹತ್ತಿಕ್ಕುವಲ್ಲಿ ಹಿರಿಯ ಅಧಿಕಾರಿಗಳು ಯಶಸ್ವಿಯಾಗಿದ್ದರು,ಅಲ್ಲದೆ ಆ ದಿನ ಬಿಜೆಪಿ ಮುಖಂಡ ಧನಂಜಯ್ ಜಾಧವ್ ಗ್ರಾಮಸ್ಥರ ಹಾಗೂ ಸಂಘಟಕರ ಸಹಕಾರದೊಂದಿಗೆ ಗುಡಿಯನ್ನು ಪ್ರತಿಷ್ಠಾಪಿಸಿದ್ದರು.

ನಂತರದ ಬೆಳವಣಿಗೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದ್ದವು, ಅಲ್ಲದೆ ವಿವಾದಿತ ಜಾಗದ ತಕರಾರನ್ನು ನಾವು ಕೈ ಬಿಡುತ್ತೇವೆ, ನಮ್ಮದೇ ಆದ್ರೂ ಅದನ್ನ ನಾವು ದೇವಸ್ಥಾನಕ್ಕೆ ದಾನ ನೀಡುತ್ತೇವೆ ಎಂದು ಇನಾಮದಾರ ಕುಟುಂಬ ಗ್ರಾಮದ ಹಿರಿಯರಲ್ಲಿ ಮನವಿ ಮಾಡಿಕೊಂಡಿದ್ದರು

ಸದ್ಯ ಘಟನೆ ಸುಖಾಂತ್ಯ ವಾದ ನಂತರ ಗ್ರಾಮೀಣ ಭಾಗದ ಕೈ ಶಾಸಕಿ ಹಾಗೂ ಕಾಂಗ್ರೆಸ್ ವಕ್ತಾರೆ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ರಣಕುಂಡೆ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಗ್ರಾಮಸ್ಥರ ಸಭೆ ಕರೆದು ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯಬಾರದು. ಜನರು ಕಿಡಿಗೇಡಿಗಳ ಮಾತಿಗೆ ಕಿವಿಗೊಡಬಾರದು ಎಂದು ಗ್ರಾಮಸ್ಥರಿಗೆ ಹೆಬ್ಬಾಳಕರ್ ವಿನಂತಿ ಮಾಡಿದ್ದಾರೆ,ಅಲ್ಲದೆ ಹೂಡಾ ದೇವಸ್ಥಾನ​ದ ಜೀರ್ಣೋದ್ಧಾರಕ್ಕೆ 20 ಸಾವಿರ ಹಣ ,ಹಾಗೂ ಮಹಾಪ್ರಸಾದ ವಿತರಿಸಲು 30 ಸಾವಿರ ಹಣ ಹೀಗೆ ಒಟ್ಟು 50 ಸಾವಿರ ಹಣ ನೀಡಿದ್ದಾರೆ.

Related Articles

Leave a Reply

Your email address will not be published.

Back to top button