Uncategorized
ಲಖೀಂಪುರ ಘಟನೆಯ ಆರೋಪಿ ಮನೆಯಲ್ಲಿದ್ದ ಶಸ್ತ್ರಾಸ್ತ್ರ ಎಸ್ಐಟಿ ವಶ
ಲಕ್ನೋ: ಲಖೀಂಪುರದ ಖೇರಿಯಲ್ಲಿ ರೈತ ಹೋರಾಟಗಾರರ ವೇಲೆ ವಾಹನ ಹರಿಸಿದ ಅಮಾನುಷ ಕೃತ್ಯ ಹಾಗೂ ಹಿಂಸಾಚಾರ, ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಅಂಕಿತ್ ದಾಸ್ ಮನೆಯಲ್ಲಿ ಶೋಧ ನಡೆಸಿ, ಒಂದು ಪಿಸ್ತೂಲ್ ಹಾಗೂ ಒಂದು ಬಂದೂಕನ್ನು ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ.
ಮುಖ್ಯ ಆರೋಪಿ ಮಿಶ್ರಾನ ನಿಕಟವರ್ತಿಯಾಗಿರುವ ಅಂಕಿತ್ ದಾಸ್ ಹೆಸರಲ್ಲಿ ಪಿಸ್ತೂಲ್ ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ. ಬಂದೂಕಿನ ಲೈಸೆನ್ಸ್ ಆರೋಪಿಯ ಅಂಗರಕ್ಷಕ ಲತೀಫ್ ಎಂಬವನ ಹೆಸರಲ್ಲಿದೆ. ಹೀಗಾಗಿ ಇಬ್ಬರೂ ಆರೋಪಿಗಳನ್ನು ಎಸ್ಐಟಿ ತಂಡ ಲಕ್ನೋಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಆರೋಪಿಗಳು ಹೊಂದಿರುವ ಪಿಸ್ತೂಲ್ ಹಾಗೂ ಬಂದೂಕು ಹಿಂಸಾಚಾರದಲ್ಲಿ ಬಳಕೆಯಾಗಿದೆಯೇ ಎಂದು ಪತ್ತೆಮಾಡಲು ಸಿಡಿಮದ್ದು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಅ.3ರಂದು ಇಬ್ಬರೂ ಈ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆಂದು ಗೊತ್ತಾಗಿದೆ.