Uncategorized

ಚಿಕ್ಕಮಗಳೂರು: ಭರ್ಜರಿ ಆಫರ್ ಕೊಟ್ಟ ಕೆಎಸ್ಆರ್​ಟಿಸಿ

ಚಿಕ್ಕಮಗಳೂರು: ತೈಲಬೆಲೆ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೋಸಿ ಹೋಗಿರುವ ಜನಸಾಮಾನ್ಯರಿಗೆ ಚಿಕ್ಕಮಗಳೂರು ವಿಭಾಗದ ಕೆಎಸ್ಆರ್ ಟಿಸಿ ಭರ್ಜರಿ ಆಫರ್ ಒಂದನ್ನು ಕೊಟ್ಟಿದೆ.

ಆರ್ಥಿಕ ಹಿಂಜರಿತದ ಪರಿಣಾಮ ಜನರು ತಮ್ಮ ಖಾಸಗಿ ವಾಹನಗಳನ್ನು ಬಳಸಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ. ಇಂತಹ ಪರಿಸ್ಥಿತಿಯನ್ನು ಮನಗಂಡು ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ಗ್ರಾಮಾಂತರ ಭಾಗಗಳನ್ನು ಒಳಗೊಂಡಂತೆ ರಿಯಾಯಿತಿ ದರದಲ್ಲಿ ನೂತನ ರೀತಿಯ ಪಾಸ್ ವ್ಯವಸ್ಥೆ ಮಾಡಿದ್ದಾರೆ. ಪ್ರತಿದಿನ ಸಂಚರಿಸುವ ಪ್ರಯಾಣಿಕರು ಪಾಸ್ ಪಡೆದರೆ ಶೇ.30ರಿಂದ 35ರವರೆಗೆ ಹಣ ತಿಂಗಳಲ್ಲಿ ಉಳಿತಾಯವಾಗಲಿದೆ ಹಾಗೂ ಮಿತಿ ಇಲ್ಲದೆ ಪ್ರಯಾಣ ಮಾಡಬಹುದು.

ನೂತನ ಪಾಸ್ ದರ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ. ಚಿಕ್ಕಮಗಳೂರಿನಿಂದ ಕಡೂರಿಗೆ 25 ದಿನಗಳ ಪ್ರಯಾಣದ ಟಿಕೆಟ್ ದರ ರೂ.2250 ಆಗುತ್ತವೆ. ಈ ಪಾಸ್ ಖರೀದಿಸಿದರೆ ರೂ.1550 ಆಗಲಿದ್ದು, ಸುಮಾರು ರೂ.700 ಹಣ ಉಳಿತಾಯವಾಗಲಿದೆ.

ಹಾಗೆಯೇ ಚಿಕ್ಕಮಗಳೂರಿನಿಂದ ಬೇಲೂರು ರೂ.1250, ಹಾಸನ ರೂ.2150, ಬೀರೂರು ರೂ.1700 ತರೀಕೆರೆ ರೂ.2250, ಭದ್ರಾವತಿ ರೂ.2450, ಶಿವಮೊಗ್ಗ ರೂ.2650, ಬಾಳೆಹೊನ್ನೂರು ರೂ.2000, ಸಕಲೇಶಪುರ ರೂ.2000, ಕೊಟ್ಟಿಗೆಹಾರ ರೂ.2000, ಅರೇಹಳ್ಳಿ ರೂ.1700, ಕಳಸಾಪುರ ರೂ.2250, ಜಾವಗಲ್ ರೂ.1550, ಬಾಣಾವರ ರೂ.1700, ಹಗರೆ ರೂ.1700, ಹಳೇಬೀಡು ರೂ.1700, ಮಲ್ಲೇನಹಲ್ಳಿ ರೂ.1100, ಜಿಲ್ಲಾ ಪಂಚಾಯಿತಿ ರೂ.450, ಶೃಂಗೇರಿ ರೂ.2550, ಕಡಬಗೆರೆ ರೂ.1700 ಹಾಗೂ ಮಾಗಡಿ ಹ್ಯಾಂಡ್ಪೋಸ್ಟ್ ರೂ.700 ಗಳ ನೂತನ ಬಸ್ ಪಾಸ್ ವ್ಯವಸ್ಥೆಯನ್ನು ಮಾಡಿದ್ದಾರೆ.

Related Articles

Leave a Reply

Your email address will not be published.

Back to top button