Uncategorized

ಮಿಸೆಸ್ ವಲ್ಡ್೯ ಸ್ಪರ್ಧೆ – ಕೊಡಗಿನ ಕಾವ್ಯಾ ಸಂಜು ಆಯ್ಕೆ

ಕೊಡಗು: ಕೊಡಗು ಜಿಲ್ಲೆಯು ಕಲೆ, ಸಾಹಿತ್ಯ, ಕ್ರೀಡೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇದೀಗ ಜಿಲ್ಲೆಯ ಶ್ರೀಮತಿಯೊಬ್ಬರು ತಮ್ಮ ಅಪೂರ್ವ ಸೌಂದರ್ಯದ ಮೂಲಕ ಮಿಸೆಸ್ ವರ್ಲ್ಡ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪಂಜಾಬ್ ನಂತರ ಕೊಡಗನ್ನು ಸುಂದರ-ಸುಂದರಿಯರ ನಾಡು ಎಂದು ಗುರುತಿಸುತ್ತಾರೆ. ಕೊಡಗಿನ ಸುಂದರಿಯರು ಎಲ್ಲಾ ರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದರೂ ಮಿಸ್ ಇಂಡಿಯಾ ಹಾಗೂ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಗಮನಾರ್ಹವಾದ ಸಾಧನೆಯನ್ನೇನೂ ಈವರೆಗೂ ಮಾಡಿರಲಿಲ್ಲ. ‘ಮಿಸ್ ಫೆಮಿನಾ ಇಂಡಿಯಾ’ ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕಿಂತ ಮೇಲ್ಪಟ್ಟು ಸಾಧನೆ ಮಾಡಿರುವುದಷ್ಟೇ ಈವರೆಗಿನ ದಾಖಲೆಯಾಗಿತ್ತು.

ಆದರೆ ಇದೀಗ ಗೋಣಿಕೊಪ್ಪ ಸಮೀಪದ ಬಾಲಾಜಿ ಗ್ರಾಮದ ಕೊಣಿಯಂಡ ಕಾವ್ಯಾ ಸಂಜು ವಿವಾಹವಾದ ಸುಮಾರು ವರ್ಷಗಳ ಬಳಿಕ ‘ಮಿಸೆಸ್ ಇಂಡಿಯಾ ಕರ್ವಿ ವರ್ಲ್ಡ್ 2021′ ಆಗಿ ಮೊನ್ನೆ ಜೈಪುರದಲ್ಲಿ ಭಾರತದ ವಿವಿಧ ರಾಜ್ಯಗಳ 40 ಸ್ಪರ್ಧಾಳುಗಳ ನಡುವೆ ಪ್ರಥಮ ಸ್ಥಾನಿಯಾಗಿ ಆಯ್ಕೆಯಾಗಿರುವದು ಕೊಡಗು ಜಿಲ್ಲೆಯ ಮಟ್ಟಿಗೆ ಗಮನಾರ್ಹ ಸಾಧನೆಯಾಗಿದೆ.

ಜೈಪುರದಲ್ ಸ್ಟರ್ಲಿಂಗ್ ಪಂಚತಾರಾ ಹೋಟೆಲ್ ನಲ್ಲಿ ಜರುಗಿದ ಫಿನಾಲೆಯಲ್ಲಿ ಅಂತಿಮ 16 ಸುಂದರಿಯರ ನಡುವೆ ಸ್ಪರ್ಧಿಸಿ ಸುಮಾರು ರೂ.50 ಸಾವಿರ ಮೌಲ್ಯದ ‘ಮಿಸೆಸ್ ಇಂಡಿಯಾ ಕರ್ವಿ ವರ್ಲ್ಡ್’ ಕಿರೀಟವನ್ನು ಕಾವ್ಯಾ ಸಂಜು ಅಲಂಕರಿಸಿದ್ದು, ಮುಂದಿನ ಜನವರಿಯಲ್ಲಿ ಇಂಡೋನೇಶಿಯಾದ ಬಾಲಿಯಲ್ಲಿ ನಡೆಯುವ ಮಿಸೆಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಕಾವ್ಯಾ ಸಂಜು ಭಾಗವಹಿಸಲಿದ್ದಾರೆ.

6 ಮಂದಿ ಕಾಶ್ಮೀರ ಸುಂದರಿಯರು, ಮುಂಬೈ, ನವದೆಹಲಿ, ಜಾರ್ಖಂಡ್ ಸುಂದರಿಯರ ನಡುವೆ ಕೊಡಗಿನ ಕಾವ್ಯಾ ಸಾಧನೆ ದಾಖಲೆಯಾಗಿದೆ.

ಸುಮಾರು 12 ರೌಂಡ್ ಗಳಲ್ಲಿ ಗೆಲ್ಲಬೇಕಿತ್ತು. ಬೆಳಗ್ಗೆ 6.30ರಿಂದ ಯೋಗ, ಜಿಮ್ ರೌಂಡ್, ಸಂದರ್ಶನ ಮತ್ತು ಪ್ರಶ್ನೋತ್ತರ ಸುತ್ತುಗಳಲ್ಲಿ ಸಮರ್ಪಕ ಉತ್ತರ ನೀಡಿರುವುದು ಅವರ ಗೆಲುವಿಗೆ ಕಾರಣ. ಪ್ರಶಸ್ತಿ ಗೆಲ್ಲುವ ನಂಬಿಕೆ ಇರದಿದ್ದರೂ. ಯಾವುದೇ ಹಂತದಲ್ಲಿಯೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಕಾವ್ಯ ಸಂಜು ಅವರು ಭಾಗವಹಿಸಿದ್ದಾರೆ. ಕಾಲೇಜು ದಿನಗಳ ಸೌಂದರ್ಯ ಸ್ಪರ್ಧೆ ಅವರ ಈ ಗೆಲುವಿಗೆ ನೆರವಾಗಿದೆ.

ವಿವಾಹ ನಂತರ ಯಾವುದೇ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿಲ್ಲ. ಟಿ.ವಿ. ಮತ್ತು ಯೂ ಟ್ಯೂಬ್‌ನಲ್ಲಿ ಸ್ಪರ್ಧೆಗೆ ಪೂರಕವಾದ ಅಂಶಗಳನ್ನು ಕಲಿತು ಸಿದ್ಧತೆ ಮಾಡಿಕೊಂಡಿದ್ದೆ. ಪೋಷಕರು, ಪತಿ ಸಂಜು, ಪುತ್ರರು ಹಾಗೂ ಸಹೋದರನ ಉತ್ತೇಜನವೂ ಗೆಲುವಿಗೆ ಕಾರಣವಾಯಿತು ಎಂದು ಕಾವ್ಯ ಅಭಿಪ್ರಾಯ ಪಟ್ಟಿದ್ದಾರೆ.

ಸ್ನಾತಕೋತ್ತರ ಪದವಿಯಲ್ಲೂ ಚಿನ್ನದ ಪದಕ:

ದಕ್ಷಿಣ ಕೊಡಗಿನ ಚೂರಿಕಾಡ್-ಬಾಡಗದ ನೆಲ್ಲೀರ ದೇವಯ್ಯ-ಸುಜು ದಂಪತಿ ಪುತ್ರಿಯಾದ ಕಾವ್ಯಾ ಬಾಲ್ಯದಿಂದಲೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾರೆ

Related Articles

Leave a Reply

Your email address will not be published.

Back to top button