ವ್ಯಕ್ತಿಗೆ ತಾಲಿಬಾನಿ ಎಂದು ಹಿಯಾಳಿಸಿದ KLE ಸೆಕ್ಯೂರಿಟಿ: ಸಿಬ್ಬಂದಿಯ ಚಳಿ ಬಿಡಿಸಿದ ಸಾರ್ವಜನಿಕರು
ಬೆಳಗಾವಿ: ಖಾಸಗಿ ಆಸ್ಪತ್ರೆಗೆ ಚಿಕೆತ್ಸೆಗೆ ಬಂದಿದ್ದ ರೋಗಿಯ ಸಂಬಂಧಿ ಒಬ್ಬರಿಗೆ ಎಮರ್ಜೆನ್ಸಿ ಗೇಟ್ ನಲ್ಲಿರುವ ಭದ್ರತಾ ಸಿಬ್ಬಂದಿ ತಾಲಿಬಾನಿ ಎಂದು ಹಿಯಾಳಿಸಿದ ಘಟನೆ ಬೆಳಗಾವಿಯ ಪ್ರತಿಷ್ಠಿತ KLE ಆಸ್ಪತ್ರೆಯಲ್ಲಿ ಜರುಗಿದೆ.
ಆಸ್ಪತ್ರೆ ಬಳಿ ನಿಂತಿರುವ ಸಮಯದಲ್ಲಿ ವ್ಯಕ್ತಿಯ ವೇಷ ಭೂಷಣ ನೋಡಿದ KLE ಆಸ್ಪತ್ರೆ ಭದ್ರತಾ ಸಿಬ್ಬಂದಿ ಆತನನ್ನು ತಾಲಿಬಾನಿ ಎಂದು ಕರೆದಿದ್ದಾನೆ ಅಲ್ಲದೆ ತಾಲಿಬಾನಿಗಳ ಬಗ್ಗೆ ಉತ್ತರಿಸುವಂತೆ ಹೇಳಿದ್ದಾನೆ ಎಂದು ಎನ್ನಲಾಗುತ್ತಿದೆ.
ಸೆಕ್ಯೂರಿಟಿ ಮಾತಿಗೆ ಕೋಪಗೊಂಡ ವ್ಯಕ್ತಿ ಆ ಬಗ್ಗೆ ನನ್ನನ್ನು ಯಾಕೆ ಹೀಗೆ ಪ್ರಶ್ನೆ ಮಾಡುತ್ತಿಯಾ ಎಂದು ತಿರುಗೇಟು ನೀಡಿದ್ದಾನೆ, ಈ ವೇಳೆ ಸ್ಥಳದಲ್ಲಿ ವೈದ್ಯರು ಮದ್ಯ ಪ್ರವೇಶ ಮಾಡುತ್ತಿದ್ದಂತೆ ಸೆಕ್ಯೂರಿಟಿ M. N ಪಾಟೀಲ್ ಕೂಡಲೇ ಕ್ಷಮೆ ಕೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸಾರ್ವಜನಿಕರು ಸೆಕ್ಯೂರಿಟಿ ಗಾರ್ಡ್ ವರ್ತನೆಯನ್ನ ಖಂಡಿಸಿದ್ದು ಇತ್ತೀಚಿಗೆ KLE ಆಸ್ಪತ್ರೆಯ ಭದ್ರತಾ ಸಿಬ್ಬಂದಿಗಳು ರೌಡಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಜಾತಿ ಧರ್ಮದ ವಿಚಾರದ ಕಲಹಗಳು KLE ಅಂತಹ ಆಸ್ಪತ್ರೆಗೆ ನಿಜಕ್ಕೂ ಕಪ್ಪು ಚುಕ್ಕೆಯಾಗಿದ್ದು, ಈ ಬಗ್ಗೆ ಮೇಲ್ವಿಚಾರಕರು ಸೂಕ್ತ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದಾಗಿದೆ.