Uncategorized

Kitchen Tips: ಪಾತ್ರೆ ತಳ ಹಿಡಿದಿದೆಯೇ? ಹೀಗೆ ಮಾಡಿ

ಅಡುಗೆ ಮನೆಯ ಕೆಲಸದ ಬಗ್ಗೆ ಎಷ್ಟೇ ಗಮನಹರಿಸಿದರೂ ಕೆಲವೊಮ್ಮೆ ಪಾತ್ರೆ ಹಿಡಿಯುವುದುಂಟು. ಎಷ್ಟೇ ತಿಕ್ಕಿದರೂ ಈ ತಳ ಹಿಡಿದ ಕಲೆ ದೂರವಾಗುವುದಿಲ್ಲ ಎಂದು ಬೇಸರಿಸುವ ಮೊದಲು ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ ನೋಡಿ.

ತಳ ಹಿಡಿದ ಪಾತ್ರೆಯಲ್ಲಿ ಒಂದು ಲೀಟರ್ ನೀರು ಹಾಕಿ ಕುದಿಸಿ. ಇದು ತಳದಲ್ಲಿ ಗಟ್ಟಿಯಾಗಿ ಅಂಟಿಕೊಂಡ ಆಹಾರಗಳನ್ನು ಮೃದುಗೊಳಿಸುತ್ತದೆ. ಬಳಿಕ ಸ್ಕ್ರಬ್ ನಿಂದ ತಿಕ್ಕಿ ತೊಳೆಯಿರಿ.

ಉಪ್ಪು ಆಹಾರಕ್ಕೆ ರುಚಿ ಕೊಡುವುದು ಮಾತ್ರವಲ್ಲ, ಪಾತ್ರೆಗಳ ಕಲೆಯನ್ನು ದೂರಮಾಡುತ್ತದೆ. ತಳ ಹಿಡಿದ ಪಾತ್ರೆಗೆ ಅರ್ಧ ಹಿಡಿ ಉಪ್ಪು ಹಾಗೂ ನಿಂಬೆ ರಸ ಹಿಂಡಿ ಅರ್ಧ ಗಂಟೆ ಪಕ್ಕಕ್ಕಿಡಿ. ಸ್ವಲ್ಪ ಹೊತ್ತಿನ ಬಳಿಕ ತಿಕ್ಕಿದರೆ ಕಲೆ ದೂರವಾಗುತ್ತದೆ.

ಅಡುಗೆ ಸೋಡಾದಿಂದಲೂ ಕಲೆಗಳನ್ನು ದೂರ ಮಾಡಬಹುದು. ನೀರಿಗೆ ಸ್ವಲ್ಪ ಅಡುಗೆ ಸೋಡಾ ಮಿಕ್ಸ್ ಮಾಡಿ ತಿಳಿ ಹಿಡಿದ ಪಾತ್ರೆಗೆ ಹಾಕಿ ಹತ್ತು ನಿಮಿಷ ಕುದಿಸಿ. ಇದರಿಂದಲೂ ಕಲೆಗಳು ದೂರವಾಗುತ್ತವೆ.

Related Articles

Leave a Reply

Your email address will not be published. Required fields are marked *

Back to top button