Uncategorized

ಬಾಗಲಕೋಟೆಯಲ್ಲಿ ಬಾಲಕಿ ಅಪಹರಣ ಕೇಸ್; ನಾಲ್ವರು ಆರೋಪಿಗಳ ಬಂಧನ, ಓರ್ವ ಪರಾರಿ

ಬಾಗಲಕೋಟೆ: ಬಾಗಲಕೋಟೆಯ ನವನಗರದಲ್ಲಿ ಬಾಲಕಿಯೋರ್ವಳು ಟ್ಯೂಷನ್ ಮುಗಿಸಿಕೊಂಡು ಬರುವಾಗ ಚಾಕಲೇಟ್ ಕೊಡುವ ನೆಪದಲ್ಲಿ ಅಪಹರಿಸಿದ ಕೇಸ್ ಗೆ ಸಂಬಂದಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ ಹೇಳಿದರು.

ಬಾಗಲಕೋಟೆ ನವನಗರದಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೆದ್ದಿರುವ ಕ್ಯಾಸಿನೊ ಹಣ ಹೊಡೆಯಲೆಂದು ಬಾಲಕಿ ಅಪರಹಣ ಮಾಡಿದ್ದರು. ಆರೋಪಿಗಳನ್ನು ಕೇವಲ 18ಗಂಟೆಯಲ್ಲಿ ಬಂಧಿಸಲಾಗಿದೆ. ಪ್ರಮುಖ ಆರೋಪಿ ಗದ್ದನಕೇರಿ ಗ್ರಾಮದ ಬೀರಪ್ಪ ಬೂದಿಹಾಳ,ಪ್ರಫುಲ್ ಪಾಟೀಲ್,ಈರಣ್ಣ ದಿವಟಗಿ, ಕಮತಗಿ ಗ್ರಾಮದ ಕೃಷ್ಣಾ ದಾಸರ ಬಂಧಿತ ಆರೋಪಿಗಳಾಗಿದ್ದು , ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಓರ್ವ ಆರೋಪಿ ಪರಾರಿಯಾಗಿದ್ದಾನೆ.

ಬಾಲಕಿಗೆ ವಾಪಸ್ ಬಿಡಲು 50ಲಕ್ಷ ಬೇಡಿಕೆ ಮೊಬೈಲ್ ಕರೆ ಆಧರಿಸಿ ಪ್ರಕರಣ ಭೇದಿಸಲಾಗಿದೆ. ಆರೋಪಿತರು ಬಾಲಕಿಯನ್ನು ಸ್ವೀಫ್ಟ್ ಕಾರಿನಲ್ಲಿ ಹುಬ್ಬಳ್ಳಿ,ಗದಗ ಕಡೆಗಳಲ್ಲೆಲ್ಲಾ ಸುತ್ತಾಡಿ ಕೊನೆಗೆ ಬಾಲಕಿ ಮನೆ ಮುಂದೆ ಬಿಟ್ಟು ಹೋಗಿದ್ದರು. ಬಂಧಿತರಿಂದ ಎರಡು ಸ್ವೀಫ್ಟ್ ಕಾರು, ಮೊಬೈಲ್ ಜಪ್ತಿ ಮಾಡಲಾಗಿದೆ.ಡಿಎಸ್ಪಿ ಚಂದ್ರಕಾಂತ ನಂದ ರೆಡ್ಡಿ ,ನವನಗರ ಠಾಣೆ ಸಿಪಿಐ ಎಸ್ ಎಂ ಅವಜಿ, ಬಾಗಲಕೋಟೆ ಶಹರ ಠಾಣೆ ಸಿಪಿಐ ವಿಜಯ್ ಮುರಗುಂಡಿ ಹಾಗೂ ಸಿಬ್ಬಂದಿಯೊಂದಿಗೆ ತಂಡ ರಚಿಸಲಾಗಿತ್ತು. ಪ್ರಕರಣ ಭೇದಿಸಿದ ತಂಡದ ಕಾರ್ಯ ಶ್ಲಾಘಿಸಿ 25ಸಾವಿರ ನಗದು ಬಹುಮಾನ ನೀಡಲಾಗಿದೆ ಎಂದು ಎಸ್ಪಿ ಲೋಕೇಶ್ ಜಗಲಾಸರ ತಿಳಿಸಿದರು.

ಗೋವಾದಲ್ಲಿ ಕ್ಯಾಸಿನೊದಲ್ಲಿ ಗೆದ್ದ ಹಣದ ಮೇಲೆ ಕಣ್ಣಿಟ್ಟು ಬಾಲಕಿ ಅಪರಹಣದಿಂದ ಹಣದ ಬೇಡಿಕೆಯಿಟ್ಟಿದ್ದರು. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 1ಕೋಟಿ ಮೌಲ್ಯದ ವಸ್ತುಗಳನ್ನು ಕಳ್ಳತನ ಪ್ರಕರಣದಡಿ ಪತ್ತೆ ಹಚ್ಚಿ ಸಂಬಂಧಿಸಿದವರಿಗೆ ನ್ಯಾಯಾಲಯದ ಆದೇಶದಂತೆ ಸಂಬಂಧಿಸಿದವರಿಗೆ ನೀಡಲಾಗಿದೆ.ಸೈಬರ್ ಪ್ರಕರಣದಲ್ಲಿ 50ಲಕ್ಷದಷ್ಟು ಹಣದ ಪ್ರಕರಣ ಬೇಧಿಸಲಾಗಿದೆ.ಆನ್ಲೈಲ್ ಮೂಲಕ ಓಟಿಪಿ ಮೂಲಕ ಹಣ ವಂಚನೆ ಮಾಡಿದ ಸಂದರ್ಭದಲ್ಲಿ ತಕ್ಷಣ ಸಂಬಂಧಿವರು ಸೈಬರ್ ಠಾಣೆಗೆ ಸಂಪರ್ಕಿಸಿ ಹಣ ವರ್ಗಾವಣೆ ತಡೆಗಟ್ಟಬಹುದು ಎಂದು ಎಸ್ಪಿ ಲೋಕೇಶ್ ಜಗಲಾಸರ ಸಾರ್ವಜನಿಕರು ಆನ್ಲೈನ್ ವಂಚನೆಗೊಳಗಾಗುವ ಮುನ್ನ ಎಚ್ಚೆತ್ತುಕೊಳ್ಳಿ ಎಂದರು. ಸುದ್ದಿಗೋಷ್ಠಿಯಲ್ಲಿ ಡಿಎಸ್ಪಿ ಚಂದ್ರಕಾಂತ ನಂದರಡ್ಡಿ, ಸೇರಿದಂತೆ ಸಿಪಿಐಗಳಾದ ಎಸ್ ಎಂ ಅವಜಿ, ವಿಜಯ್ ಮುರಗುಂಡಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button