Breaking NewsLatestUncategorized

ಕೇರಳದಲ್ಲಿ ಭಾರೀ ಮಳೆ; 21 ಮಂದಿ ಸಾವು

ತಿರುವನಂತಪುರಂ: ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಿಂದಾಗಿ ಕೇರಳದ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲದಲಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಅಯ್ಯಪ್ಪ ಭಕ್ತರು ಇಂದು ಮತ್ತು ಶಬರಿಮಲೆಗೆ ಭೇಟಿ ನೀಡದಿರುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಇಂದು ಬೆಳಗಿನ ವೇಳೆಗೆ ಕೇರಳದ ಬುತೇಕ ಕಡೆ ಮಳೆಯ ತೀವ್ರತೆ ಕಡಿಮೆಯಾಗಿದ್ದು, ರಾತ್ರಿಯಿಡೀ ಭಾರೀ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.

ಸಿಎಂ ಪಿಣರಾಯಿ ವಿಜಯನ್ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದು, ಭೂಕುಸಿತದಿಂದಾಗಿ ಅಪಾಯದಲ್ಲಿರುವವರ ರಕ್ಷಣೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ನಾಳೆಯಿಂದ ಆರಂಭವಾಗಬೇಕಿದ್ದ ಕಾಲೇಜುಗಳನ್ನು ಇನ್ನೂ ಎರಡು ದಿನ ತಡೆದು ಆರಂಭಿಸಲು ಸೂಚಿಸಲಾಗಿದೆ.

Related Articles

Leave a Reply

Your email address will not be published.

Back to top button