Uncategorized

ಮಲ್ಪೆಯಲ್ಲಿ ಚಲಿಸುವ ಬೋಟ್ ನಲ್ಲೂ ಕನ್ನಡ ಗೀತೆಗಳು!

ಉಡುಪಿ: ರಾಜ್ಯೋತ್ಸವ ಪ್ರಯುಕ್ತ ರಾಜ್ಯಾದ್ಯಂತ ಇಂದು ಹನ್ನೊಂದು ಗಂಟೆಗೆ ಸಮೂಹ ಗಾಯನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಲಿಸುವ ಬೋಟಿನಲ್ಲೂ ಕನ್ನಡ ಗೀತೆಗಳು ಅನುರಣಿಸಿದವು. ಮಲ್ಪೆ ಬೀಚ್ ನಿಂದ ಸಾಗಿದ ಬೋಟ್​ನಲ್ಲಿ ನೂರಕ್ಕೂ ಅಧಿಕ ಗಾಯಕರಿಂದ ಸಮೂಹ ಗಾಯನ ನಡೆಯಿತು.

ಮಲ್ಪೆ ಮತ್ತು ಸೈಂಟ್ ಮೇರಿಸ್ ದ್ವೀಪದ ನಡುವೆ ಇದಕ್ಕೆಂದೇ ಬೋಟ್ ವ್ಯವಸ್ಥೆ ಮಾಡಲಾಗಿತ್ತು. ಸಮುದ್ರದಲ್ಲಿ ಮೊಳಗಿದ ಕನ್ನಡ ಗೀತೆಗಳಿಗೆ ಅಲೆಗಳು ಸಾಥ್ ನೀಡಿದವು.

Related Articles

Leave a Reply

Your email address will not be published.

Back to top button