Uncategorized

ಕೊಟ್ಟ ಮಾತಿನಂತೆ ನಡೆದ ಸಚಿವ ಭೈರತಿ ಬಸವರಾಜ್…!

ದಾವಣಗೆರೆ: 66ನೇ ಕನ್ನಡ ರಾಜ್ಯೋತ್ಸವಾದ ಅಂಗವಾಗಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ಧ್ವಜಾರೋಹಣ ಮಾಡುವ ಮೂಲಕ ಕನ್ನಡ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಪೊಲೀಸ್ ಕವಾಯತು, ಸ್ಕೌಟ್ ಗೈಡ್ಸ್ ಮತ್ತು ಇತರೆ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಶಿಕ್ಷಕ – ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ 14 ಜನರನ್ನು ಗುರುತಿಸಿ ಉತ್ತಮ ಶಿಕ್ಷಕರು ಎಂದು ವೈಯಕ್ತಿಕವಾಗಿ ಅವರಿಗೆ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಶಾಲು, ಹಾರ, ಪ್ರಶಸ್ತಿ ಪತ್ರ ಮೂಲಕ ಸನ್ಮಾನಿಸಿದರು. ‌

ಕಳೆದ ಸಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಯ್ಕೆಯಾದ ಉತ್ತಮ ಶಿಕ್ಷಕರನ್ನು ಸನ್ಮಾನಿಸುವ ವೇಳೆ ಜಿಲ್ಲಾಡಳಿತ ವತಿಯಿಂದ ಉತ್ತಮ ಶಿಕ್ಷಕರನ್ನು ಗುರುತಿಸಿ ಅಯ್ಕೆ ಮಾಡಿ ನನಗೆ ಪಟ್ಟಿ ನೀಡಿದರೆ, ಅವರನ್ನು ಬರುವ ಕನ್ನಡ ರಾಜ್ಯೋತ್ಸವದಂದು ವೈಯಕ್ತಿಕವಾಗಿ ನಗದು ಪುರಸ್ಕಾರ ನೀಡಿ ಗೌರವಿಸುವ ಬಗ್ಗೆ ಬೈರತಿ ಬಸವರಾಜ ಅವರು ಘೋಷಿಸಿದ್ದರು. ಕೊಟ್ಟ ಮಾತಿನಂತೆ ಇಂದು ಜಿಲ್ಲೆಯ 14 ಜನ ಶಿಕ್ಷಕರಿಗೆ ನಗದು ಬಹುಮಾನ ನೀಡುವ ಮೂಲಕ ಗೌರವಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್. ಎ. ರವೀಂದ್ರನಾಥ ವಹಿಸಿದ್ದರು. ಸಂಸದ ಜಿ. ಎಂ. ಸಿದ್ದೇಶ್ವರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ ಸಿಇಓ ಡಾ.ಮಹಾಂತೇಶ್ ಬಿ. ದಾನಮ್ಮನವರ್, ದಾವಣಗೆರೆ ಮೇಯರ್ ಎಸ್.ಟಿ.ವೀರೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ. ಬಿ. ರಿಷ್ಯಂತ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button