Uncategorized

ಕನ್ನಡ ರಾಜ್ಯೋತ್ಸವಕ್ಕೆ ಶಾಸಕ ಅಜಯಸಿಂಗ್ ಗೈರು: ಕನ್ನಡಪರ ಸಂಘಟನೆಗಳಿಂದ ಮಿಂಚಿನ ರಸ್ತೆ ತಡೆ

ಕಲಬುರಗಿ: ಕಳೆದ ಹಲವು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಉದ್ದೇಶಪೂರ್ವಕವಾಗಿ ಶಾಸಕ ಅಜಯಸಿಂಗ್ ಗೈರಾಗುತ್ತಿದ್ದಾರೆ ಅಂತ ಆಕ್ರೋಶಗೊಂಡ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜೇವರ್ಗಿ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಕಳೆದ ಐದಾರು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳದೆ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ. ನಿನ್ನೆ ಕ್ಷೇತ್ರದಲ್ಲಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಶಾಸಕರು ಇಂದು ಕನ್ನಡ ಸಂಭ್ರಮದಲ್ಲಿ ಪಾಲ್ಗೊಂಡಿಲ್ಲ ಅಂತ ಸಂಘಟನೆಕಾರರು ಕಿಡಿ ಕಾರಿದ್ದಾರೆ.

ಕಲಬುರಗಿ- ವಿಜಯಪುರ ಮುಖ್ಯ ರಸ್ತೆ ತಡೆದು
ರಸ್ತೆ ಮಧ್ಯದಲ್ಲಿ ಕುಳಿತು ಪ್ರೋಟೆಸ್ಟ್ ಮಾಡಿದ್ದಾರೆ. ರಸ್ತೆ ತಡೆಯಿಂದ ಸುಮಾರು ದೂರದವರೆಗೆ ವಾಹನಗಳು ಸರದಿ ಸಾಲಿನಲ್ಲಿ ನಿಂತಿವೆ‌. ರಸ್ತೆ ತಡೆ ಮಾಡದಂತೆ ಪೊಲೀಸ್ ಅಧಿಕಾರಿಗಳು ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಗೆ ಮನವಿ ಮಾಡಿದರೂ ಕೇಳದಿದ್ದಾಗ ಇಬ್ಬರ ನಡುವೆ ವಾಗ್ವಾಧ ಕೂಡಾ ನಡೆಯಿತು.‌

Related Articles

Leave a Reply

Your email address will not be published.

Back to top button