Uncategorized
ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಸಮರ್ಥವಿದೆ: ಕನ್ಹಯ್ಯ ಕುಮಾರ್
ನವದೆಹಲಿ: ದೇಶದಲ್ಲಿ ಬಿಜೆಪಿಯ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲ ಏಕೈಕ ಪಕ್ಷವಾಗಿದೆ. ಇದೊಂದೇ ನಮಗಿರುವ ಆಯ್ಕೆ ಎಂದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್ ಹೇಳಿದ್ದಾರೆ.
ಪಂಜಾಬಿನ ಕಾಂಗ್ರೆಸ್ ಬಿಕ್ಕಟ್ಟು ಮತ್ತು ಜಿ 23 ಕುರಿತು ಪ್ರತಿಕ್ರಿಯಿಸಿರುವ ಅವರು, “ಒಂದು ಮನೆಯೊಳಗೆ ಯಾವುದಾದರೂ ಕೆಲವು ಸಮಸ್ಯೆಗಳು ಅಥವಾ ದೂರುಗಳು ಇದ್ದೇ ಇರುತ್ತವೆ. ಕಾಂಗ್ರೆಸ್ ಚಂದ್ರನಂತಿದೆ. ಕೆಲವೊಮ್ಮೆ ಬೆಳೆಯುತ್ತಿರುವಂತೆ ತೋರುತ್ತದೆ. ಜನ ಒಗ್ಗಟ್ಟಾಗಿ ನಿಂತರೆ ಬಿಜೆಪಿಯನ್ನು ಸುಲಭವಾಗಿ ಮಣಿಸಬಹುದು ಎಂದರು.
ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆಯೂ ಪ್ರಸ್ತಾಪಿಸಿರುವ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವಾಗಿ ಮಮತಾ ಬ್ಯಾನರ್ಜಿ ಅಥವಾ ರಾಹುಲ್ ಗಾಂಧಿಯನ್ನು ತಮ್ಮ ನಾಯಕನನ್ನಾಗಿ ಮಾಡಬೇಕೇ ಎಂದು ಜನರು ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.