Uncategorized

ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ: ಗ್ರಾಮಸ್ಥರ ಹೊಡೆತಕ್ಕಂಜಿ ಅಸಲಿ ಕಥೆ ಬಿಚ್ಚಿಟ್ಟ ಪ್ರಿಯಕರ

ಕಲಬರಗಿ: ಪ್ರಿಯಕರನೊಂದಿಗೆ ಸರಸವಾಡಲು ಅಡ್ಡವಾಗಿದ್ದ ಗಂಡನನ್ನೆ ಕೊಂದು, ಕುಡಿದು ಸತ್ತಿದ್ದಾನೆಂದು ನಂಬಿಸಿದ್ದ ಖತರ್ನಾಕ್ ಹೆಂಡತಿ ಹಾಗೂ ಆಕೆಯ ಪ್ರೀಯಕರನ ಅಸಲಿಯತ್ತು ಎರಡು ತಿಂಗಳ ಬಳಿಕ ಹೊರಬಿದ್ದಿದ್ದು, ಈಗ ಇಬ್ಬರು ಜೈಲು ಪಾಲಾಗಿದ್ದಾರೆ.

ಕಳೆದ ಆಗಸ್ಟ್ 24 ರಂದು ಸೇಡಂ ತಾಲ್ಲೂಕಿನ ಈರ್ನಾಪಲ್ಲಿ ಗ್ರಾಮದಲ್ಲಿ 38 ವರ್ಷದ ರಾಜಪ್ಪರೆಡ್ಡಿ ಎಂಬಾತ ಸಾವನ್ನಪ್ಪಿದ್ದ, ಪ್ರೀಯಕರನೊಂದಿಗೆ ಸೇರಿ ಕೊಲೆ ಮಾಡಿದ ಹೆಂಡತಿ, ತನ್ನ ಗಂಡ ಕುಡಿದು ಸತ್ತಿದ್ದಾನೆ ಅಂತಾ ಕತೆ ಕಟ್ಟಿದ್ದಳು. ಅತಿಯಾಗಿ ಕುಡಿಯುತ್ತಿದ್ದ ರಾಜಪ್ಪ‌ರೆಡ್ಡಿ ಕುಡಿದು ಸತ್ತಿರಬಹುದು ಅಂತ ನಂಬಿದ ಕುಟುಂಬಸ್ಥರು ಗ್ರಾಮಸ್ಥರು ಅಂತ್ಯಸಂಸ್ಕಾರ ಕೂಡಾ ನೇರವೇರಿಸಿದ್ದರು.

ಎರಡು ತಿಂಗಳ ಬಳಿಕ ಬಯಲಾಯ್ತು ಕೊಲೆಯ ರಹಸ್ಯ:

ಗಂಡನ ಸಾವಿನ ಬಳಿಕ ಪ್ರಿಯಕರನೊಂದಿಗೆ ಸರಸ ಸಲ್ಲಾಪ ಮುಂದುವರೆಸಿದ್ದ ರಾಜಪ್ಪರೆಡ್ಡಿಯ ಹೆಂಡತಿ ಅನಸೂಯಾ ಪ್ರಿಯಕರ ಶ್ರೀಶೈಲ್ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಪ್ರಿಯಕರ ಶ್ರೀಶೈಲ್‌ ನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದಾಗ ಆತ ಅಸಲಿ ಕಥೆ ಬಾಯಿಬಿಟ್ಟಿದ್ದಾನೆ.

ಕಳೆದ ಲಾಕ್‌ಡೌನ್ ಸಂಧರ್ಭದಲ್ಲಿ ತೆಲಂಗಾಣದ ಅಂತಾವರಂಗೆ ಪತ್ನಿಯ ಮನೆಗೆ ರಾಜಪ್ಪರೆಡ್ಡಿ ತೆರಳಿದ್ದ, ಕೆಲ ತಿಂಗಳುಗಳ ಕಾಲ ಅಂತಾವರಂ ನಲ್ಲೆ ಉಳಿದಿದ್ದ. ಈ ವೇಳೆ ಪಕ್ಕದ ಮನೆಯ ಶ್ರೀಶೈಲ್ ಜೊತೆ ಪತ್ನಿ ಅನಸೂಯಾ ಅಕ್ರಮ ಸಂಬಂದ ಬೆಳಸಿಕೊಂಡಿದ್ದಾಳೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದ ತಕ್ಷಣ ಆಕೆಯನ್ನು ತವರು ಮನೆಯಿಂದ ಈರ್ನಾಪಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಆದ್ರೆ ಗಂಡನ ಮನೆಗೆ ಬಂದ‌ ಮೇಲು ಅನಸೂಯಾ ಹಾಗೂ ಶ್ರೀಶೈಲ್ ಲವ್ವಿಡವ್ವಿ ಮುಂದುವರೆದಿತ್ತು. ಹೆಂಡತಿಯ ಲವ್ವಿ ಡವ್ವಿಯಿಂದ ಬೆಸತ್ತಿದ್ದ ರಾಜಪ್ಪರೆಡ್ಡಿ ಕುಡಿತದ ದಾಸನಾಗಿ ಇಬ್ಬರ ಸರಸಕ್ಕೆ ಅಡ್ಡಿ ಪಡಿಸುತ್ತಿದ್ದನಂತೆ, ತಮ್ಮಿಬ್ಬರ ಸರಸಕ್ಕೆ ಅಡ್ಡಿಯಾದ ರಾಜಪ್ಪರೆಡ್ಡಿಗೆ ಕಂಠಪೂರ್ತಿ ಕುಡಿಸಿ ಮಾತ್ರೆ ನೀಡಿದ್ದಾರೆ. ಕುಡಿದು ಮಾತ್ರೆ ಸೇವಿಸಿದ್ರು ಸಾಯದ ಹಿನ್ನಲೆಯಲ್ಲಿ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಶ್ರೀಶೈಲ್ ಅಸಲಿಯತ್ತು ಬಾಯಿ ಬಿಟ್ಟಿದ್ದಾನೆ.

ಸದ್ಯ ಗಂಡನನ್ನ ಕೊಲೆ ಮಾಡಿದ ಪತ್ನಿ ಅನುಸೂಯಾ , ಪ್ರಿಯಕರ ಶ್ರೀಶೈಲ್ ಪೊಲೀಸ್‌ರ ವಶದಲ್ಲಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published.

Back to top button