Uncategorized

ಕಲಬುರಗಿ ಭೂಕಂಪ; ಹೈದರಾಬಾದ್​ನಿಂದ ತಜ್ಞರ ತಂಡ

ಕಲಬುರಗಿ: ಗಡಿಕೇಶ್ವರದಲ್ಲಿ ನಿರಂತರ ಭೂ ಕಂಪನ ಸಂಭವಿಸುತ್ತಿದ್ದು, ಕಂಪನದ ಅಧ್ಯಯನಕ್ಕಾಗಿ ಹೈದ್ರಾಬಾದ್ ನಿಂದ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಭೇಟಿ ನೀಡಿ ಅಧ್ಯಯನ ನಡೆಸುತ್ತಿದೆ‌. ಭೂ ಕಂಪನದ ಅಲೆಯನ್ನ ಅಳೆಯಲು ಗ್ರಾಮದಲ್ಲಿ ತಾತ್ಕಾಲಿಕವಾಗಿ ಸಿಸ್ಮೋಮೀಟರ್ ಅಳವಡಿಸಿದ್ದಾರೆ.

ಚಿಂಚೋಳಿ ತಾಲೂಕು ಗಡಿಕೇಶ್ವರದಲ್ಲಿ ಕಳೆದ 10 ದಿನಗಳಿಂದ ನಿರಂತರವಾಗಿ ಭೂ ಕಂಪನ ಸಂಭವಿಸುತ್ತಲೆ ಇದೆ. ಭೂ ಕಂಪನಕ್ಕೆ ಹೆದರಿ ಗ್ರಾಮಸ್ಥರು ಊರು ತೊರೆದಿದ್ದಾರೆ. ಜನರಲ್ಲಿ ಭಯ ಆತಂಕ ಹೆಚ್ಚಿಸಿರುವ ಭೂ ಕಂಪನದ ಬಗ್ಗೆ ಅಧ್ಯಯನ ನಡೆಸಲು ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿ ಕಂಪನದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಭೂ ಕಂಪನದ ಅಲೆಗಳನ್ನ ಅಳೆಯಲು ಗ್ರಾಮದ ಗ್ರಾಮ ಪಂಚಾಯತಿ ಕಚೇರಿಯಲ್ಲಿ ತಾತ್ಕಾಲಿಕವಾಗಿ ಸಿಸ್ಮೋಮಿಟರ್ ಅಳವಡಿಸಿದ್ದಾರೆ. ಗ್ರಾಮದಲ್ಲಿ ಸಿಸ್ಮೋಮೀಟರ್ ಸ್ಥಾಪಿಸಿದ್ದರಿಂದ ಗಡಿಕೇಶ್ವರ ಸುತ್ತ ಮುತ್ತ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿದ್ದಲ್ಲಿ ನೆಲದೊಳಗಿನ‌ ಭೂಮಿಯ ಚಲನೆ ಸಿಸ್ಮೋಮೀಟರ್ ನಲ್ಲಿ ದಾಖಲಾಗಿ ಮಾಹಿತಿ ನೇರವಾಗಿ ಹೈದರಾಬಾದಿನ ಎನ್.ಜಿ.ಆರ್.ಐ ಸಂಸ್ಥೆಗೆ ಹೋಗಲಿದೆ. ಮಾಹಿತಿ ಆಧರಿಸಿ‌ ಮುಂದೆ ಕೈಗೊಳ್ಳಬೇಕಾದ‌ ಕ್ರಮಗಳ‌ ಬಗ್ಗೆ‌ ವಿಜ್ಞಾನಿಗಳ ತಂಡ‌ ನಿರ್ಧರಿಸಲಿದೆ. ಎನ್ ಜಿ ಆರ್ ಐ ವಿಜ್ಞಾನಿಗಳಿಗೆ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ ವಿಜ್ಞಾನಿಗಳು ಸಾಥ್ ನೀಡಿದ್ರು.

ಸಂಸದ, ಶಾಸಕರಿಗೂ ತಟ್ಟಿದ ಭೂಕಂಪನ ಬಿಸಿ

ಭೂಕಂಪನದಿಂದ ಜರ್ಜಿತಗೊಂಡ ಗಡಿಕೇಶ್ವರ ಗ್ರಾಮಸ್ಥರು ಗ್ರಾಮ ತೊರೆಯುತ್ತಿರುವದರಿಂದ ಸಂಸದ ಉಮೇಶ ಜಾಧವ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಸ್ವತಾ ಗ್ರಾಮ ವಾಸ್ತವ್ಯ ಮಾಡಿ ಜನರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಗಡಿಕೇಶ್ವರದ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿ ರಾತ್ರಿ ಮಲಗಿರುವ ವೇಳೆ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಮತ್ತೆ ಭೂಮಿ‌ ಕಂಪಿಸಿದ್ದು ಸಂಸದ ಶಾಸಕರಿಗೂ ಭೂ ಕಂಪನದ ಅನುಭವವಾಗಿದೆ. ವಿಪರ್ಯಾಸ ಎಂದ್ರೆ ಸಂಸದರು ಗ್ರಾಮ ವಾಸ್ತವ್ಯದ ರಾತ್ರಿ ಒಂದು ಗಂಟೆಯಿಂದ ಬೆಳಗಿನವರೆಗೆ ಕರೆಂಟ್ ಕೈಕೊಟ್ಟಿದ್ದು ರಾತ್ರಿ ಇಡೀ ಕತ್ತಲಲ್ಲೆ ಕಾಲ ಕಳೆದಿದ್ದಾರೆ. ಇನ್ನು ಈ ಹಿಂದೆ ಗಡಿಕೇಶ್ವರಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಭೂ ಕಂಪನದ ಅನುಭವ ಆಗಿತ್ತು. ಸ್ವತಃ ಕಂಪನದ ಎಫೆಕ್ಟ್ ಪಡೆದ ಸಂಸದ ಜಾಧವ್, ಸರ್ಕಾರದಿಂದ ವ್ಯವಸ್ಥೆ ಕಲ್ಪಿಸೋದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ನಿರಂತರವಾಗಿ ಭೂ ಕಂಪನ ಆಗ್ತಿರೋದ್ರಿಂದ ಜನರಲ್ಲಿ ಭಯ-ಆತಂಕ ಮುಂದುವರೆದಿದ್ದು, ಕಾಳಜಿ ಕೇಂದ್ರ ಓಪನ್ ಮಾಡಿದ್ರು ಜನ ಊರು ತೊರೆಯುತ್ತಲೆ ಇದ್ದಾರೆ. ಭೂ ಕಂಪನದ ಬಗ್ಗೆ ವಿಜ್ಞಾನಿಗಳು, ಅಧಿಕಾರಿಗಳು ಸಂಶೋಧನೆ ನಡೆಸಲಿ ಆದ್ರೆ ತಕ್ಷಣಕ್ಕೆ ನಮಗೆ ಮನೆಗೊಂದು ತಾತ್ಕಾಲಿಕ ಟೀನ್ ಶೆಡ್ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಡಿಮ್ಯಾಂಡ್ ಮಾಡ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button