Uncategorized

ಕಾಂಗ್ರೆಸ್ ಪಕ್ಷ ಮುಸ್ಲಿಂಮರಿಗೆ ಯಾವ ಉನ್ನತ ಹುದ್ದೆ ನೀಡಿದೆ ಹೇಳಿ: ಜಮೀರ್‌ ಅಹ್ಮದ್‌ಗೆ ಜೆಡಿಎಸ್ ನಾಯಕ ಉಸ್ತಾದ ತೀರುಗೇಟು

ಕಲಬುರಗಿ: ಜೆಡಿಎಸ್ ನಾಯಕರಿಗೆ ಮುಸ್ಲಿಂಮರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಸ್ಲಿಂ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಿ ಅಂತ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್​​ ಖಾನ್​​​ ಸವಾಲಿಗೆ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್ ತೀರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಉಸ್ತಾದ್, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ತಮ್ಮ ನಾಯಕರನ್ನು ಮೆಚ್ಚಿಸಲು ಚಮಚಾಗಿರಿ ಮಾಡುತ್ತಿದ್ದಾರೆ. ಮೈಮೇಲೆ ಜ್ಞಾನ ಇಲ್ಲದೆ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ ಅಂತ ಜಮೀರ್ ವಿರುದ್ಧ ಹರಿಹಾಯ್ದರು. 60 ವರ್ಷದಲ್ಲಿ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಹುದ್ದೆ ನೀಡಲು ಆಗದ ಕಾಂಗ್ರೆಸ್ ನಾಯಕರು, ಜೆಡಿಎಸ್ ಪಕ್ಷಕ್ಕೆ ಸವಾಲು ಹಾಕುವ ನೈತಿಕತೆ ಇದೆಯಾ?, ಕಾಂಗ್ರೆಸ್ ಪಕ್ಷ ಇಲ್ಲಿವರೆಗೆ ಮುಸ್ಲಿಂರನ್ನು ಸಿಎಂ, ಡಿಸಿಎಂ, ಪಕ್ಷದ ಅಧ್ಯಕ್ಷ ಅಥವಾ ಗೃಹ ಸಚಿವರನ್ನಾಗಿ ಮಾಡಿದೆಯಾ? ಅಂತ ಜಮೀರ್ ಅಹ್ಮದ ವಿರುದ್ಧ ನಾಸಿರ್ ಹುಸೇನ್ ಉಸ್ತಾದ ಕೆಂಡಕಾರಿದರು.

ಜಮೀರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ನಾಯಕರು ಚಮಚಾಗಿರಿ ಮಾಡುವದು ಬಿಡಬೇಕು. ಬೇರೆಯವರ ತಟ್ಟೆಯಲ್ಲಿ ಏನು ಬಿದ್ದಿದೆ ನೋಡುವ ಮುನ್ನ ತಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ಅನ್ನೋದು ನೋಡಿಕೊಳ್ಳಬೇಕು ಅಂತ ಜಮೀರ್ ಗೆ ತಿರುಗೇಟು ನೀಡಿದರು.

Related Articles

Leave a Reply

Your email address will not be published.

Back to top button