Uncategorized

ಹುಬ್ಬಳ್ಳಿಯಲ್ಲಿ ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ: 3 ಲಕ್ಷದ 80 ಸಾವಿರ ಬೆಲೆ ಬೈಕ್ ವಶ

ಧಾರವಾಡ: ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ, ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಚಾಲಕಿ ಕಳ್ಳರನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನ ಸಕಲೇಪುರದ ಜಮ್ಮನಹಳ್ಳಿ ಗ್ರಾಮದ ಲಿಂಗರಾಜ್ ಅಲಿಯಾಸ್ ಉಮೇಶ ರಾಮೇಗೌಡ, ಶಿರಸಿ ತಾಲೂಕಿನ ಅಮ್ಮೇನಹಳ್ಳಿಯ ಪ್ರವೀಣಕುಮಾರ ವೆಂಕಟರಮಣ ನಾಯ್ಕ ಹಾಗೂ ಗೋಕುಲ ರಸ್ತೆಯ ಜಗದೀಶನಗರದ ಬಿ.ಕೆ.ಶಿವಮೂರ್ತಿ ಎಂದು ಗುರುತಿಸಲಾಗಿದೆ.

ಬಂಧಿತರಿಂದ 3ಲಕ್ಷ 80 ಸಾವಿರ ರೂಪಾಯಿ ಮೌಲ್ಯದ ನಾಲ್ಕು ವಿವಿಧ ಕಂಪನಿಯ ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related Articles

Leave a Reply

Your email address will not be published.

Back to top button