Uncategorized

ಛತ್ತೀಸ್​ಘಡದಲ್ಲಿ ದಿಢೀರ್ ಅಸ್ವಸ್ಥರಾದ 26 ಮಂದಿ ಯೋಧರು

ರಾಯ್ಪುರ: ನಕ್ಸಲರು ಅಧಿಕ ಸಂಖ್ಯೆಯಲ್ಲಿರುವ ಛತ್ತೀಸಗಡ, ಮಧ್ಯಪ್ರದೇಶ ನಡುವಿನ ಗಡಿಭಾಗದಲ್ಲಿ ಕರ್ತವ್ಯ ನಿರತರಾಗಿದ್ದ ಮಿಲಿಟರಿ ಕ್ಯಾಂಪ್ ನಲ್ಲಿದ್ದ 26 ಮಂದಿ ಇಂಡೋ ಟಿಬೆಟಿಯನ್ ಯೋಧರು ದಿಢೀರ್ ಅನಾರೋಗ್ಯದಿಂದ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಛತ್ತೀಸಗಡದ ರಾಜ್ ನಂದಗಾವಿನಲ್ಲಿ ನಡೆದಿದೆ.

ಕ್ಯಾಂಪ್ ನಲ್ಲಿ ರಾತ್ರಿವೇಳೆ ಪನೀರ್ ಮತ್ತು ಮಾಂಸದ ಊಟ, ಸೇವಿಸಿದ್ದರು. ಬಳಿಕ ಯೋಧರು ಅಸ್ವಸ್ಥರಾಗಿದ್ದಾರೆ. ಫುಡ್ ಪಾಯ್ಸನ್ ಪರಿಣಾಮ ಅಸ್ವಸ್ಥರಾಗಿರಬಹುದೆಂದು ಶಂಕಿಸಲಾಗಿದೆ. ಎಲ್ಲರನ್ನೂ ಚಿಕಿತ್ಸಾ ಕೇಂದ್ರಗಳಿಗೆ ದಾಖಲಿಸಲಾಗಿದೆ. ಎಲ್ಲರ ಸ್ಥಿತಿಯೂ ಸದ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published.

Back to top button