Uncategorized

ಕನಕಪುರದಲ್ಲಿ ಕಾಡುಪ್ರಾಣಿ ಬೇಟೆಗೆ ತೆರಳಿದ್ದವರ ಬಂಧನ

ರಾಮನಗರ: ಅರಣ್ಯ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬೇಟೆಯಾಡಲು ಹೊಂಚು ಹಾಕುತ್ತಿದ್ದ ಐವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ ನಾಡ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವ ಘಟನೆ ಕನಕಪುರ ತಾಲೂಕಿನ ಸಂಗಮ ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಅಕ್ರಮ ಬೇಟೆಗಾಗಿ ತೆರಳಿದ್ದ ಮಕಳಂದ ಗ್ರಾಮದ ಸುಬ್ಬಯ್ಯ ಹಾಗೂ ಮಂಜು ಮತ್ತು ದೊಡ್ಡಆಲಹಳ್ಳಿ ಗ್ರಾಮದ ಪುಟ್ಟಸ್ವಾಮಿ ಬಂಧಿತ ಆರೊಪಿಗಳಾಗಿದ್ದಾರೆ. ಮಕಳಂದ ಗ್ರಾಮದ ಕೆಂಚೇಗೌಡ ಮತ್ತು ಕೀರ್ತಿ ಎಂಬಾತ ತರೆಮರೆಸಿಕೊಂಡವರಾಗಿದ್ದಾರೆ.

ಕಾವೇರಿ ವನ್ಯ ಜೀವಿ ವಿಭಾಗದ ಭೂವಳ್ಳಿ ಶಾಖೆ ನಾಯ್ಕನಹಳ್ಳಿಯ ಕುರುಬನಗುಡ್ಡೆ ಅರಣ್ಯ ಪ್ರದೇಶದಲ್ಲಿ ರಾತ್ರಿ ನಾಡ ಬಂದೂಕು ಹಾಗೂ ಮದ್ದುಗುಂಡುಗಳನ್ನು ಇಟ್ಟುಕೊಂಡು ಬೇಟೆಗೆ ತೆರಳಿದ್ದರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ನಾಗೇಂದ್ರ ಮಾರ್ಗದಾರ್ಶನದಲ್ಲಿ ಖಚಿತ ಮಾಹಿತಯನ್ನು ಆಧರಿಸಿ ವಲಯ ಅರಣ್ಯಾಧಿಕಾರಿ ಡಿ.ದೇವರಾಜು, ನಿಹಾಲ್‌ಅಹಮ್ಮದ್ ಹಾಗೂ ಡಿ.ಆರ್.ಎಫ್‌ಗಳಾಸ ಸದಾಶಿವ ಉಪ್ಪಾರ, ವೆಂಕಟೇಶ್, ರಕ್ಷಕರಾದ ಲಿಂಗಪ್ಪ, ಜೆ.ರವಿ, ವೀಕ್ಷಕರು ಮತ್ತು ಸಿಬ್ಬಂಧಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Related Articles

Leave a Reply

Your email address will not be published.

Back to top button