Uncategorized
ಭಾರೀ ಮಳೆಗೆ ಮನೆ ಗೋಡೆ ಕುಸಿತ
ಕುಂದಾಣ ಹೋಬಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ವಿಶ್ವನಾಥಪುರ ಗ್ರಾಮದ ಶಾಂತಮ್ಮ ಮುನಿಆಂಜಿನಪ್ಪ ಎಂಬುವವರ ಮನೆ ಗೋಡೆ ಕುಸಿದಿದೆ.
ನಿನ್ನೆ ಸುರಿದ ಮಳೆಗೆ ಮನೆಯ ಗೋಡೆ ಕುಸಿದಿದ್ದು ಮನೆಯಲ್ಲಿ ಯಾರು ಇಲ್ಲದ ಕಾರಣ ಯಾರಿಗೂ ಅಪಾಯ ಉಂಟಾಗಿಲ್ಲ ಮನೆಯೊಳಗೆ ಇದ್ದ ಕೆಲವು ವಸ್ತುಗಳಿಗೆ ಹಾನಿಯುಂಟಾಗಿದೆ.
ಕಳೆದೆರೆಡು ದಿನಗಳಿಂದ ಕುಂದಾಣ ಹೋಬಳಿಯಾದ್ಯಂತ ಬಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದು ಕುಂದಾಣ, ವಿಶ್ವನಾಥ್ ಪುರ, ಜಾಲಿಗೆ, ಆಲೂರು ದುದ್ದನಹಳ್ಳಿ, ಕಾರಹಳ್ಳಿ, ಮತ್ತು ಕೊಯಿರಾ ಗ್ರಾಮ ಪಂಚಾಯಿತಿಗಳ ಬಹುತೇಕ ಕೆರೆ ಕುಂಟೆಗಳಲ್ಲಿ ನೀರು ತುಂಬಿವೆ.