Uncategorized

ಒಂಟಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಮನೆಗಳ್ಳನ ಬಂಧನ

ರಾಮನಗರ : ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕನ್ನ ಹಾಕಿ ಐಷಾರಾಮಿ ಜೀವನ ನಡೆಸುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸಿರುವ ಮಾಗಡಿ ಪೊಲೀಸರು 11 ಪ್ರಕರಣಗಳನ್ನು ಬೇಸಿ 36.5 ಲಕ್ಷ ವೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಜ್ಯೋತಿಪುರ ಗ್ರಾಮದ ರಘು (29) ಬಂತ ಆರೋಪಿ. ಈತನಿಂದ ನಗದು ಸೇರಿದಂತೆ 36.5 ಲಕ್ಷ ರುಪಾಯಿ ವೌಲ್ಯದ 805 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಕಳೆದ ಜುಲೈ 29ರಂದು ಮಾಗಡಿ ತಾಲೂಕು ಕೆ.ವಿ.ತಾಂಡ್ಯ ಗ್ರಾಮದ ವಾಸಿ ಶಾರದಮ್ಮ ಕೂಲಿ ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ಹಿಂದಿರುಗಿದ್ದಾರೆ. ಮಾಂಗಲ್ಯ ಸರ ಮತ್ತು ಒಂದು ಜೊತೆ ಕಿವಿ ಓಲೆಯನ್ನು ಟಿವಿ ಪಕ್ಕದಲ್ಲಿ ಬಿಚ್ಚಿಟ್ಟು ಸ್ನಾನಕ್ಕೆ ಹೋದಾಗ ಕಳ್ಳರು ವಡವೆಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ರೀತಿ ಕುದೂರು, ತಾವರೆಕೆರೆ, ರಾಮನಗರ ಟೌನ್ ಹಾಗೂ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು.

ಈ ಪ್ರಕರಣಗಳ ಪತ್ತೆಗಾಗಿ ಮಾಗಡಿ ಉಪ ವಿಭಾಗದ ಉಪಾಧೀಕ್ಷಕ ಟಿ.ಎ.ಓಂ ಪ್ರಕಾಶ್ ನೇತೃತ್ವದಲ್ಲಿ ಆರಕ್ಷಕ ನಿರೀಕ್ಷಕ ಬಿ.ರವಿ ಹಾಗೂ ಪಿಎಸ್ ಐ ಎಸ್ .ಶ್ರೀಕಾಂತ್ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ಈ ತಂಡ ಆರೋಪಿ ರಘುನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಮಾಗಡಿ ಠಾಣೆ ವ್ಯಾಪ್ತಿಯ 3, ಕುದೂರು ಠಾಣೆಯ 4, ರಾಮನಗರ ಗ್ರಾಮಾಂತರ ಠಾಣೆಯ ೨ ,ತಾವರೆಕೆರೆ ಹಾಗೂ ರಾಮನಗರ ಪುರ ಠಾಣೆಯ ತಲಾ 1 ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಬೀಗ ಹಾಕಿರುವ ಒಂಟಿ ಮನೆಗಳನ್ನು ಗಮನಿಸಿ ಬೀಗ ತೆಗೆದು ಅಥವಾ ಹೊಡೆದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಹಣ ಸಂಪಾದಿಸಿ ಐಷಾರಾಮಿ ಜೀವನ ಮಾಡುತ್ತಿದ್ದನು.

ಈ ಹಿಂದೆ ತುಮಕೂರು ಜಿಲ್ಲೆಯ ಹೆಬ್ಬೂರು, ತುಮಕೂರು ಗ್ರಾಮಾಂತರ, ಕೊರಟಗೆರೆ, ಕೋರಾ, ಕೊಳಾಲ, ಕ್ಯಾತಸಂದ್ರ ಪೊಲೀಸ್ ಠಾಣೆಗಳಲ್ಲಿನ ಒಟ್ಟು ೧೫ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈತ ದಸ್ತಗಿರಿಯಾಗಿ ಕಾರಾಗೃಹದಲ್ಲಿದ್ದು, ನಂತರ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದು ಕಳ್ಳತನ ಮುಂದುವರೆಸಿದ್ದನು.

ಮಾಗಡಿ ಉಪ ವಿಭಾಗದ ಉಪಾಧೀಕ್ಷಕ ಟಿ.ಎ.ಓಂ ಪ್ರಕಾಶ್ ನೇತೃತ್ವದಲ್ಲಿ ಆರಕ್ಷಕ ನಿರೀಕ್ಷಕ ಬಿ.ರವಿ ಹಾಗೂ ಪಿಎಸ್ ಐ ಎಸ್ .ಶ್ರೀಕಾಂತ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಾಗಡಿ ಪೊಲೀಸ್ ಠಾಣೆಯ ಎಎಸ್ ಐ ದೇವರಾಜು, ಸಿಬ್ಬಂದಿಗಳಾದ ಮುತ್ತುರಾಜು, ಕೆ.ನಾಗರಾಜು, ಬೀರಪ್ಪ, ಮಂಜುನಾಥ್ , ಈರಣ್ಣ, ಲೋಹಿತ್ ಕುಮಾರ್ , ಮುನೀಂದ್ರ, ಕೇಶವ್ ಪಾಲ್ಗೊಂಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎಸ್ .ಗಿರೀಶ್ ಸುದ್ದಿಗೋಷ್ಠಿಯಲ್ಲಿ ಪ್ರಕರಣ ಬೇಸಿದ್ದನ್ನು ವಿವರಿಸಿದರಲ್ಲದೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಹುಮಾನ ಘೋಷಿಸಿದರು.

Related Articles

Leave a Reply

Your email address will not be published. Required fields are marked *

Back to top button