ಹೆಂಚಿನ ಮನೆ ಕುಸಿದುಬಿದ್ದು ನಾಲ್ವರಿಗೆ ಗಾಯ
ರಾಮನಗರ: ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಇತ್ತೀಚಿಗೆ ಸುರಿದ ಬಿರು ಮಳೆಯಿಂದಾಗಿ ಹಳೆಯ ಮನೆಗಳು ಕುಸಿಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ನಗರದ ಎಂ.ಜಿ ರಸ್ತೆಯಲ್ಲಿರುವ ಶಿವನಾಂದ ಥಿಯೇಟರ್ ಸಮೀಪದ ದಿನೇಶ್ ಲ್ಯಾಬ್ ಮುಂಭಾಗದಲ್ಲಿದ್ದ ಹಳೆಯ ಹೆಂಚಿನ ಮನೆಯೊಂದು ಕುಸಿದು ಬಿದ್ದು, ನಾಲ್ವರಿಗೆ ಗಾಯಗಳಾಗಿವೆ.
ಮನೆಯಲ್ಲಿ ಯಾರೂ ವಾಸವಿರಲಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ಮನೆಯ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಈಗ ಇತ್ಯರ್ಥವಾಗಿದೆ. ಈ ಹಳೆಯ ಮನೆಯ ಜಾಗವನ್ನು ನಾರಾಯಣ್ ಡಿಜಿಟಲ್ ಸ್ಟುಡೀಯೋ ಮಾಲೀಕರು ಕೊಂಡುಕೊಂಡಿದ್ದರು ಎಂದು ತಿಳಿದು ಬಂದಿದೆ.
ದಿನೇಶ್ ಲ್ಯಾಬ್ಗೆ ಪರೀಕ್ಷೆಗೆ ಬರುವ ರೋಗಿ ಗಳು, ಆ ಹಳೆಯ ಮನೆಯ ಮುಂಭಾಗ ಕುಳಿತುಕೊಳ್ಳು ವುದು ಅಷ್ಟೇ ಅಲ್ಲದೆ, ಮನೆಯ ಒಳಗಡೆ ಹೋಗಿ ಶೌಚ ಮಾಡುವುದು ನಡೆದಿತ್ತು. ಕಳೆದ ಹಲವು ದಿವಸಗಳಿಂದ ಮಳೆ ಬಿದ್ದಿ ದ್ದರಿಂದ ಮೇಲ್ಗಡೆಯಿಂದ ಶಿಥಿಲಾವಸ್ಥೆಗೆ ಬಂದಿದ್ದ ಮನೆ ಸ್ವಲ್ಪವೇ ಸ್ವಲ್ಪವೇ ಬೀಳುತ್ತಿ ರುವಂತೆ ಕಂಡು ಬಂದು ಕೆಲವರು ಓಡಿ ಬಂದಿದ್ದಾರೆ.
ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದ ಯೋಗೇಶ್ ಎಂಬ ಯುವಕನೂ ಸಹ ಲ್ಯಾಬ್ಗೆ ಪರೀಕ್ಷೆ ಮಾಡಿಸಿಕೊಳ್ಳಲು ಹೋಗಿದ್ದು, ಆತ ಫೋನಿನಲ್ಲಿ ಮಾತನಾಡುತ್ತಾ ಮೈ ಮರೆತ್ತಿದ್ದರಿಂದ ಕುಸಿದು ಬೀಳುವ ಸಂದರ್ಭದಲ್ಲಿ ಓಡಿ ಬರಲು ಸಾಧ್ಯವಾಗದೆ ಅವನ ಹಾಗೂ ಇನ್ನಿತರೆ ಮೂವರ ಮೇಲೆ ಗೋಡೆ ಕುಸಿದಿದೆ.
ಯೋಗೇಶನಿಗೆ ನಡುವಿನ ಮೇಲೆ ಗೋಡೆಬಿದ್ದು ಆಘಾತವಾಗಿದ್ದು, ಅವರನ್ನು ಮಂಡ್ಯ ಆಸ್ಪತ್ರೆಗೆ ಕಳುಹಿಸ ಲಾಗಿದೆ. ಉಳಿದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ತಪ್ಪಿಸಿ ಕೊಂಡಿದ್ದು, ಆಸ್ಪ ತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಕಟ್ಟಡದ ಅವಶೇಷ ದಲ್ಲಿ ಮತ್ತಷ್ಟು ಜನ ಸಿಕ್ಕಿಕೊಂಡಿರಬಹುದು ಎಂಬ ಸಂಶಯದ ಮೇಲೆ ದಿನೇಶ್ ಲ್ಯಾಬ್ನ ಮಾಲೀಕರು, ಜೆಸಿ ಬಿಯನ್ನು ತರಿಸಿ, ಅದನ್ನು ತೆರವು ಗೊಳಿಸಿದಾಗ, ಅಂತಹ ಯಾವುದೇ ಘಟನೆಯು ನಡೆದಿಲ್ಲದ ಬಗ್ಗೆ ದೃಢವಾಗಿದೆ.
ಈ ವಿಷಯದಲ್ಲಿ ತೀರಾ ಹತ್ತಿರದಲ್ಲಿ ಮತ್ತಷ್ಟು ಜನ ಕುಳಿತಿದ್ದರೆ, ಭಾರೀ ಅನಾ ಹುತವಾಗುವ ಸಾಧ್ಯತೆ ಇತ್ತು ಎನ್ನಲಾಗಿದ್ದು, ಈ ಸಂಬಂಧ ನಗರ ಪೊಲೀಸರು, ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂದರ್ಭದಲ್ಲಿ ಎಸ್ಐ ಮಮತಾ ಹಾಗೂ ಅವರ ಸಿಬ್ಬಂದಿ ಸ್ಥಳದಲ್ಲಿದ್ದು ನಡೆದ ಘಟನೆಯ ಬಗ್ಗೆ ಸಮರ್ಪಕ ಮಾಹಿತಿ ಪಡೆದುಕೊಂಡರು. ಸ್ಥಳಕ್ಕೆ ತಹಶೀಲ್ದಾರ್ ನಾಗೇಶ್, ನಗರಸಭೆಯ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರ ಸಹಾಯ ದಿಂದ ಕಟ್ಟಡ ಅವಶೇಷ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.