Uncategorized

ಕುದುರೆ ರೇಸ್ ಹುಚ್ಚಾಟಕ್ಕೆ ಪ್ರಾಣಿಗಳಿಗೆ ಹಿಂಸೆ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ವರದಿ: ಮಲ್ಲಿಕ್ ಬೆಳಗಲಿ

ಬೆಳಗಾವಿ: ದಸರಾ ನಿಮಿತ್ತ ನಾಡಿನಾದ್ಯಂತ ಒಂದಿಲ್ಲಾ ಒಂದು ಮನೋರಂಜನಾ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಂತಹ ಕಾರ್ಯಕ್ರಮಗಳು ಇದೀಗ ಅಪಾಯಕಾರಿ ರೂಪ ಪಡೆದುಕೊಳ್ಳುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.

ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯ ದಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತಿಹಾಳ ಗ್ರಾಮದಲ್ಲಿ ಇಂದು ಕುದುರೆ ರೇಸ್ ಏರ್ಪಡಿಸಿದ್ದ ವ್ಯವಸ್ಥಾಪಕರು ಇದನ್ನ ಅದ್ದೂರಿಯಾಗಿ ನಿರ್ವಹಿಸಿದ್ದಾರೆ.

ಚಿಕ್ಕದಾದ 10 ಅಡಿ ರಸ್ತೆಯಲ್ಲಿ ಹತ್ತಾರು ಚಕ್ಕಡಿಗಳ ಮೂಲಕ ರೇಸ್ ನಡೆಸಿರುವ ವಿಡಿಯೋ ಹರಿದಾಡುತ್ತಿದ್ದು, ಯುವಕರು ಗ್ರಾಮಸ್ಥರು ಮಾತ್ರವಲ್ಲದೆ, ಹಲವು ಕೆಲ ರಾಜಕೀಯ ಮುಖಂಡರು ಕೂಡ ಇಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ.

ಇನ್ನು ಪ್ರಾಣಿಗಳನ್ನ ಬಳಸಿ ಹಾಗೂ ಹಿಂಸೆ ನೀಡಿ ಯಾವುದೇ ರೀತಿಯ ರೇಸ್ ಅಥವಾ ಮನರಂಜನೆ ಕಾರ್ಯಕ್ರಮಗಳನ್ನು ನ್ಯಾಯಾಲಯ ಈಗಾಗಲೇ ನಿಷೇಧಿಸಿದೆ. ಇಂತಹ ಕಾರ್ಯಕ್ರಮಗಳು ನಡೆಯದಂತೆ ಹಾಗೂ ಅಕಸ್ಮಾತ್ ನಡೆಯುವುದು ಇದ್ದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದು ಕೂಡ ಕಡ್ಡಾಯ. ಆದ್ರೆ ಅತಿಹಾಳ ಗ್ರಾಮದಲ್ಲಿ ಇದ್ಯಾವುದನ್ನು ಪಾಲನೆ ಮಾಡದೆ ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆದು ವಿಕೃತ ಮನರಂಜನೆ ಕಾರ್ಯಕ್ರಮ ನಡೆದು ಹೋಗಿದೆ.

ಸದ್ಯ ಮುಂದಿನ ದಿನಗಳಲ್ಲಿ ಆದ್ರೂ ಬೆಳಗಾವಿ ಜಿಲ್ಲಾಡಳಿತ ಇಂತಹ ಘಟನೆಗಳು ಮರುಕಳಿಸಿದಂತೆ ನೋಡಿಕೊಳ್ಳುವುದು ಒಳಿತು. ಇನ್ನು ಯುವ ಸಮುದಾಯ ರೇಸ್ ಹುಚ್ಚಿಗೆ ಹೋಗಿ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತಂದು ಕೊಂಡಿರುವ ಘಟನೆ ಕೂಡ ಜರುಗಿದ್ದು, ಎಚ್ಚರದಿಂದ ಇರಬೇಕಾಗಿದೆ.

Related Articles

Leave a Reply

Your email address will not be published. Required fields are marked *

Back to top button