Uncategorized

ಅಳ್ನಾವರ ತಾಲೂಕಿನಲ್ಲಿ ಮತಾಂತರ ಆರೋಪ: ಜನರನ್ನು ವಾಪಸ್​​ ಮನೆಗೆ ಕಳುಹಿಸಿದ ಬಜರಂಗದಳ ಕಾರ್ಯಕರ್ತರು

ಧಾರವಾಡ: ಜಿಲ್ಲೆಯ ಅಳ್ನಾವರ ತಾಲೂಕಿನ ಗ್ರಾಮೀಣ ಭಾಗದ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆರೋಪ‌ ಕೇಳಿ ಬಂದ ಹಿನ್ನೆಲೆಯಲ್ಲಿ, ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ, ಮತಾಂತರ ತಡೆದು ಕ್ರಿಶ್ಚಿಯನ್ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಜನರನ್ನು ವಾಪಸ್​​ ಕಳುಹಿಸಿರುವ ಘಟನೆ ನಡೆದಿದೆ.

ಅಳ್ನಾವರ ಹಳಿಯಾಳ ರಸ್ತೆಯ ದಯಾಸಾಗರ ನಿವಾಸದಲ್ಲಿ. ತಾಲೂಕಿನ ಬೆನಚ್ಚಿ, ಸಾದನಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮದ ಹಿಂದೂಗಳನ್ನು ಸೇರಿಸಿಕೊಂಡು ಮತಾಂತರಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ‌ಸ್ಥಳೀಯರ ಮಾಹಿತಿ ಮೇರೆಗೆ ದಾಳಿ ಮಾಡಿದ ಅಳ್ನಾವರದ ಬಜರಂಗದಳ ಕಾರ್ಯಕರ್ತರು ಪ್ರಾರ್ಥನೆ ಹಾಗೂ ಮತಾಂತರವನ್ನು ತಡೆದು, ಮತಾಂತರ ನಡೆದ ಮನೆಯಿಂದಲೇ ವಿಡಿಯೋ ಮಾಡುವ ಮೂಲಕ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಒತ್ತಾಯ ಮಾಡಿದ್ದಾರೆ.

ತಾಲೂಕಿನ ಹಳಿಯಾಳ ರಸ್ತೆಯ ದಯಾಸಾಗರ ನಿವಾಸದಲ್ಲಿ ನಡೆಯುತ್ತಿದ್ದ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆಯಲ್ಲಿ, ಗ್ರಾಮೀಣ ಭಾಗದ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ಮಾಡಿ ಮತಾಂತರ ನಡೆಸಲಾಗುತ್ತಿದೆ. ಕೆಲವು ಕ್ರಿಶ್ಚಿಯನ್‌‌ರು ಹಿಂದೂಗಳಿಗೆ ಹಲವು ಆಮಿಷ ಒಡ್ಡುವ ಮೂಲಕ ಮತಾಂತರವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದು, ಈಗಲಾದರು ಗೃಹ ಸಚಿವರು ಹಾಗೂ ಮುಖ್ಯಂಮತ್ರಿಗಳು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಅಗ್ರಹಿಸಿದರು

Related Articles

Leave a Reply

Your email address will not be published.

Back to top button