Heavy Rain: ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ವರುಣನ ಆರ್ಭಟ
ಧಾರವಾಡ: ಹುಬ್ಬಳ್ಳಿ – ಧಾರವಾಡ ಅವಳಿನಗರದಲ್ಲಿ ಮಳೆರಾಯನ ಅರ್ಭಟ ಜೋರಾಗಿದೆ. ತಡ ಸಂಜೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮಳೆರಾಯನ ಆಗಮನವಾಗಿದ್ದು, ಸತತ ಎರಡು ಗಂಟೆಗಳ ಕಾಲ ಅವಳಿ ನಗರದಲ್ಲಿ ವರುಣ ಅರ್ಭಟಿಸಿದ್ದಾನೆ. ನಿರಂತರ ಮಳೆಯಿಂದಾಗಿ ಅವಳಿ ನಗರ ತಗ್ಗು ಪ್ರದೇಶ ಕೇಲವು ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯರಲ್ಲಿ ಆತಂಕ ವರುಣ ಆತಂಕ ಸೃಷ್ಟಿ ಮಾಡಿದ್ದಾನೆ. ಇನ್ನೂ ಮಳೆರಾಯನ ಆಗಮನದಿಂದ ರೈತರಲ್ಲಿ ಸಂತಸ ಮನೆ ಮಾಡಿದ್ದು, ಆದರೆ ತಗ್ಗು ಪ್ರದೇಶ ನಿವಾಸಿಗಳಲ್ಲಿ ಮಳೆ ಆತಂಕ ಮೂಡಿಸಿತ್ತು.
ಕಳೆದ ಎರಡು ದಿನಗಳಿಂದ ಹುಬ್ಬಳ್ಖಿ ಹಾಗೂ ಧಾರವಾಡದಲ್ಲಿ ಮಿಒಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಹುಬ್ಬಳ್ಳಿಯಲ್ಲಿ ಕಳೆದ ದಿನ ಮಳೆರಾಯ ಕೊಂಚ ತನ್ನು ಅರ್ಭಟ ತೋರಿಸಿ ತನ್ನಗಾಗಿದ್ದನ್ನು. ಆದರೆ ಮತ್ತೆ ಮೋಡ ಕವಿದ ವಾತಾವರಣವು ಅವಳಿನಗರದಲ್ಲಿ ಹಾಗೇ ಮುಂದುರೆದಿತ್ತು. ಸಂಜೆ ವೇಳೆ ಅರ್ಭಟಿಸಲು ತಯಾರಿ ನಡೆಸಿದ್ದ ವರುಣ, ತಡ ಸಂಜೆಯಾಗುತ್ತಲ್ಲೇ ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಸತತವಾಗಿ ಎರಡು ಗಂಟೆಗೂ ಹೆಚ್ಚುಕಾಲ ತನ್ನ ಅರ್ಭಟ್ ತೋರಿದ್ದಾನೆ.
ಇನ್ನೂ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಬ್ಬಳ್ಳಿ ನಗರದ ಮಂಟೂರ ರಸ್ತೆ, ಹಳೇಹುಬ್ಬಳ್ಳಿ, ಚನ್ನಪೇಟ, ಆನಂದ ನಗರ, ಗಣೇಶ ನಗರ, ಬೆಂಗೇರಿ, ಸಿದ್ದೇಶ್ವರ ಪಾರ್ಕ್, ತೋಳನಕೆರೆ, ನವ ಅಯೋಧ್ಯಾ ನಗರ ಮೂರನೇ ಕ್ರಾಸ್, ಮಂಜುನಾಥ ನಗರ, ರಣದಮ್ಮ ಕಾಲೊನಿ, ಮಾಧವನಗರ, ದೇವಾಂಗಪೇಟೆ ಆತಂಕ ಸೃಷ್ಟಿಯಾಗಿದ್ದು, ಇಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸ್ಋಷ್ಟಿಯಾಗಿದೆ.
ಧಾರವಾಡದ ಜನತ್ ನಗರ, ರಾಮ ನಗರ, ವಿದ್ಯಾಗಿರಿ, ಸರಸ್ವತಪೂರ, ಲಕ್ಷ್ಮಿಸಿಂಗ್ ನಗರ, ಮಾಳಮಡ್ಡಿ, ಶ್ರೀ ರಾಮನಗರ ಸೇರಿದಂತೆ ಹಲವು ತಗ್ಗು ಪ್ರದೇಶದಲ್ಲಿನ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ಆತಂಕ ಹೆಚ್ಚಾಗಿದ್ದು, ಕಳೆದ ಹಲವು ದಿನಗಳಿಂದ ಅವಳಿನಗರ ಜನತೆಗೆ ರೆಸ್ಟ್ ನೀಡಿದ ಮಳೆರಾಯ ತನ್ನ ಅರ್ಭಟ ಆರಂಭಿಸಿದ್ದು, ಈಗಮಳೆರಾಯನ ಆಗಮನದಿಂದ ರೈತರಲ್ಲಿ ಸಂತಸ ಮೂಡಿಸಿದೆ.