Uncategorized

ಕಳಸದಲ್ಲಿ ಮಳೆ ಅಬ್ಬರ; ಕೊಚ್ಚಿಹೋದ ಕಾಫಿತೋಟ

ಚಿಕ್ಕಮಗಳೂರು : ಮಳೆ ಅಬ್ಬರಕ್ಕೆ ರಭಸದಲ್ಲಿ ನೀರು ಹರಿದು ಕಾಫಿತೋಟ ಕೊಚ್ಚಿ ಹೋಗಿರುವ ಘಟನೆ ಕಳಸ ತಾಲೂಕಿನ ಮುಳ್ಳೋಡಿ ಗ್ರಾಮದಲ್ಲಿ ನಡೆದಿದೆ.

ಗುಡ್ಡದಿಂದ ಹರಿದ ನೀರು ಕಿರು ಸೇತುವೆ ಮೇಲೆ ಹರಿದು ತೋಟಕ್ಕೆ ಹಾನಿಯಾಗಿದೆ. ಕಳಸ, ಕುದುರೆಮುಖ ಸುತ್ತಮುತ್ತ ಕಳೆದ ರಾತ್ರಿ ಒಂದು ತಾಸಿಗೂ ಹೆಚ್ಚು ಕಾಲ ಭಾರಿ ಮಳೆಯಾಗಿದ್ದು, ಮೂವರು ರೈತರ ಕಾಫಿ ತೋಟಗಳಿಗೆ ಹಾನಿಯಾಗಿದೆ.

ಕಳೆದ ಬಾರಿಯ ಮಹಾಮಳೆಯಿಂದ ಹಲವು ತೋಟಗಳು ಹಾನಿಯಾಗಿತ್ತು. ಆದರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡದಿರುವುದು ಸರ್ಕಾರದ ವಿರುದ್ಧ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Related Articles

Leave a Reply

Your email address will not be published.

Back to top button