Uncategorized

ವರುಣನ ಅವಕೃಪೆಗೆ ಕೊಚ್ಚಿ ಹೋದ ಭತ್ತದ ಬೆಳೆ : ಕಂಗಾಲಾದ ರೈತರು

ಬೆಳಗಾವಿ: ಜಿಲ್ಲೆಯಲ್ಲಿ ವರುಣರಾಯನ ಆರ್ಭಟ ಮತ್ತೆ ಆರಂಭವಾಗಿದೆ. ರವಿವಾರ ಸುರಿದ ಮಳೆಗೆ ಬೆಳಗಾವಿ ಸುತ್ತಮುತ್ತಲಿನ ಹೊಲಗದ್ದೆಗಳಲ್ಲಿ ಬೆಳೆದಿದ್ದ ಭತ್ತದ ಬೆಳೆ ನೀರು ಪಾಲಾಗಿದೆ. ರೈತರು ಬೆಳೆದಿದ್ದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.

ರವಿವಾರ ಸಾಯಂಕಾಲ 5 ಗಂಟೆ ಸುಮಾರಿಗೆ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರೈತರು ಬೆಳೆದಿದ್ದ ಬೆಳೆಗಳು ನೀರು ಪಾಲಾಗಿವೆ. ಇನ್ನು ಮುಂಗಾರಿನಲ್ಲಿ ಬೆಳೆದಿದ್ದ ಭತ್ತದ ಬೆಳೆ ಕೊಯ್ಲಿಗೆ ಬಂದಿತ್ತು. ಇನ್ನು ಕೆಲ ರೈತರು ಭತ್ತವನ್ನು ಕೊಯ್ದು ಗದ್ದೆಳಲ್ಲಿ ಹಾಕಿದ್ದರು. ಆದರೆ ಸಾಯಂಕಾಲ ಸುರಿದ ಮಳೆಯಿಂದಾಗಿ ಕೊಯ್ಲು ಮಾಡಿದ್ದ ಭತ್ತದ ಪೈರು ನೀರು ಪಾಲಾಗಿದೆ.

ಇನ್ನು ಬೆಳಗಾವಿ ನಗರ ಪ್ರದೇಶದಲ್ಲಿಯೂ ಮಳೆರಾಯನ ಆರ್ಭಟ ಮುಂದುವರೆದಿದೆ. ದೀಪಾವಳಿ ನಿಮಿತ್ಯವಾಗಿ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಖರೀದಿಗಾಗಿ ಆಗಮಿಸಿದ್ದರು. ರವಿವಾರವಾದ್ದರಿಂದ ಜನರು ತುಸು ಹೆಚ್ಚಾಗಿಯೇ ಮಾರುಕಟ್ಟೆಯತ್ತ ಆಗಮಿಸಿದ್ದರು. ಆದರೆ ಮಳೆಯ ಕಾರಣದಿಂದಾಗಿ ಮಾರುಕಟ್ಟೆಯಾದ್ಯಂತ ಎಲ್ಲಿ ನೋಡಿದರೂ ನೀರೋ ನೀರು ಎನ್ನುವಂತಾಗಿತ್ತು. ಮಳೆರಾಯನ ಆರ್ಭಟಕ್ಕೆ ಜನತೆ ಒಟ್ಟಾರೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

Related Articles

Leave a Reply

Your email address will not be published.

Back to top button