Uncategorized

ವಿಮಾನದಲ್ಲಿ ಬೆಲೆಬಾಳುವ ವಸ್ತುಗಳ ಅಕ್ರಮ ಸಾಗಾಟ

ಮಂಗಳೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ತಪಾಸಣೆ ವೇಳೆ ವ್ಯಕ್ತಿಯೋರ್ವ ದುಬೈನಿಂದ ಅಕ್ರಮವಾಗಿ ಚಿನ್ನ ಹಾಗೂ ಬೆಲೆಬಾಳುವ ವಸ್ತುಗಳನ್ನು ಸಾಗಣೆ ಮಾಡಿರುವುದು ಪತ್ತೆಯಾಗಿದೆ.

ಭಟ್ಕಳ ಮೂಲದ ವ್ಯಕ್ತಿಯ ಬಳಿ 201.200 ಗ್ರಾಂ ತೂಕದ ಚಿನ್ನದ ಬಿಲ್ಲೆ, 24 ಗ್ರಾಂ ಚಿನ್ನದ ನಾಣ್ಯ, ರೂ.1,02,600 ಮೌಲ್ಯದ ಆಪಲ್ ಐಫೋನ್, ರೂ.1,69,500 ಮೌಲ್ಯದ ಸುಗಂಧ ದ್ರವ್ಯಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Leave a Reply

Your email address will not be published.

Back to top button