Uncategorized
ಕಟ್ಟಿಗೆ ತರಲೆಂದು ಹೊದ ಬಾಲಕಿ ಶವವಾಗಿ ಪತ್ತೆ; ಇಬ್ಬರು ಯುವಕರು ಸೇರಿ ಕೊಲೆ ಮಾಡಿರುವ ಆರೋಪ
ಕಲಬುರಗಿ: ಮನೆಯ ಹಿಂದೆ ಕಟ್ಟಿಗೆ ತರಲು ಹೋದಾಗ ಅನುಮಾನಸ್ಪದ ರೀತಿಯಲ್ಲಿ ಬಾಲಕಿಯೊರ್ವಳು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿರುವ ಘಟನೆ ಕಲಬುರಗಿ ತಾಲ್ಲೂಕಿನ ಪಾಣೆಗಾಂವ್ ತಾಂಡಾದಲ್ಲಿ ನಡೆದಿದೆ.
ಪಾಯಲ್ (15) ಮೃತ ಬಾಲಕಿಯಾಗಿದ್ದು, ಬಾಲಕಿಗೆ ವಿಷ ಕುಡಿಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಿನ್ನೆ ಸಂಜೆ ಕಟ್ಟಿಗೆ ತರೋದಕ್ಕೆ ಮನೆಯ ಹಿಂದೆ ತೆರಳಿದಾಗ ಘಟನೆ ನಡೆದಿದೆ. ಇಬ್ಬರು ಯುವಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ವಿಷ ಕುಡಿಸಿ ಕೊಲೆಮಾಡಿದ್ದಾರೆ ಎನ್ನಲಾಗುತ್ತಿದೆ.
ಪಾಣೆಗಾಂವ್ ಗ್ರಾಮದ ನಿವಾಸಿಗಳಾದ ಸುನೀಲ್ ಮತ್ತು ಆತನ ಸ್ನೇಹಿತ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಬಾಲಕಿ ಪೋಷಕರು ಆರೋಪ ಮಾಡಿದ್ದಾರೆ. ಈ ಕುರಿತು ಫರತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ತನಖೆ ನಂತರವಷ್ಟೆ ಕೊಲೆಗೆ ಕಾರಣ ಏನು? ಕೊಲೆಗಡುಕರು ಯಾರು ಅನ್ನೋದು ತಿಳಿದುಬರಬೇಕಿದೆ.