Uncategorized

ಗೋಕರ್ಣದಲ್ಲಿ ಸಮುದ್ರ ಪಾಲಾಗುತ್ತಿದ್ದ ನಾಲ್ವರ ರಕ್ಷಣೆ

ಕಾರವಾರ : ಸಮುದ್ರದಲ್ಲಿ ಈಜಾಡಲು ತೆರಳಿದ್ಧ ನಾಲ್ವರು ಯುವಕರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕುಡ್ಲೆ ಬೀಚ್ ಕಡಲ ತೀರದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರ್ ಮೂಲದ ತೇಜಸ್ವಿ ಬಿರ್ಜೆ ಮೋಹನಸಿಂಗ್ (21), ಬೀದರ ಜಿಲ್ಲೆಯ ಕಮಲಾನಗರದ ಉಮಾಕಾಂತ ವಾಸುಮತಿ (20), ಬೆಳಗಾವಿಯ ನಿಶಾದ್ ರಾಘವೇಂದ್ರ ಕುಲಕರ್ಣಿ (20), ಬಿಹಾರದ ನಿಶಾನ್ ಸೀನಾ ಪಟ್ಕಾ (21) ರಕ್ಷಣೆಗೊಳಗಾದವರಾಗಿದ್ದಾರೆ.

ಇವರೆಲ್ಲರೂ ಬೆಂಗಳೂರು ಪಿ.ಇ.ಎಸ್. ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಗೋಕರ್ಣದ ಕುಡ್ಲೆಬೀಚ್ ಪ್ರವಾಸಕ್ಕೆಂದು ಗುರುವಾರ ಮುಂಜಾನೆ 11 ವಿದ್ಯಾರ್ಥಿಗಳ ತಂಡದೊಂದಿಗೆ ಇಲ್ಲಿಗೆ ಬಂದಿದ್ದರು. ಇವರೆಲ್ಲರೂ ಸಮುದ್ರದಲ್ಲಿ ಈಜಲು ತೆರಳಿದಾಗ ನಾಲ್ವರು ಯುವಕರು ನೀರಿನ ರಭಸದ ಸುಳಿಗೆ ಸಿಕ್ಕು ಕೊಚ್ಚಿ ಹೋಗುತ್ತಿರುವಾಗ ಲೈಫ್ ಗಾರ್ಡ್ ಸಿಬ್ಬಂದಿಗಳಾದ ರಾಜು ಅಂಬಿಗ, ನಾಗೇಂದ್ರ ಕುರ್ಲೆ, ಪ್ರವಾಸಿ ಮಿತ್ರ ಶೇಖರ ಬಿ.ಹರಿಕಂತ್ರ, ಕರಾವಳಿ ಕಾವಲು ಪಡೆ ಸಿಬ್ಬಂದಿ ನಾಗೇಂದ್ರ ಜಿ.ಠಾಕರ್ ಅವರು ಸ್ಥಳೀಯ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳ ಸಹಕಾರದೊಂದಿಗೆ ರಕ್ಷಿಸಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Articles

Leave a Reply

Your email address will not be published.

Back to top button