Uncategorized

ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ವಿರೋಧಿಸಿದ ರೈತರನ್ನು ಕೊಲೆ ಮಾಡುತ್ತಿದೆ: ರೈತ ಸಂಘಗಳ ಆರೋಪ

ಕೋಲಾರ: ಉತ್ತರ ಪ್ರದೇಶದಲ್ಲಿ ಹೋರಾಟ ನಿರತರಾಗಿದ್ದ ರೈತರ ಮೇಲೆ ಕಾರು ಚಲಾಯಿಸಿ ರೈತರ ಹತ್ಯೆಗೆ ಕಾರಣವಾದ ಬಿಜೆಪಿಯ ಕೊಲೆಪಾತಕ ಧಾಳಿಯನ್ನು ಖಂಡಿಸಿ ನಗರದ ಮೆಕ್ಕೆ ವೃತ್ತದಲ್ಲಿ ಸೋಮವಾರ ಸಂಯುಕ್ತ ಕಿಸಾನ್ ಸಮಿತಿಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಭಾನುವಾರ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಸಾವಿರಾರು ರೈತರ ಮೇಲೆ ಕೇಂದ್ರ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾರ ಮಗನು ಬೆಂಗಾವಲು ಪಡೆಯ ವಾಹನಗಳನ್ನು ಚಲಾಯಿಸಿ, ಪ್ರತಿಭಟನಾ ನಿರತ ನಾಲ್ವರು ರೈತರನ್ನು ಹತ್ಯೆ ಮಾಡಿದ ಕೊಲೆಪಾತಕ ದುಷ್ಜೃತ್ಯವನ್ನು ಖಂಡಿಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿದರು.

ಕೇಂದ್ರ ಸರ್ಕಾರದ ರೈತ ವಿರೋಧಿ, ಕೃಷಿ ವಿರೋಧಿ ಕಾರ್ಪೊರೇಟ್ ಪರ ಕಾಯ್ದೆಗಳ ವಿರುದ್ಧ ಕಳೆದ ಹತ್ತು ತಿಂಗಳಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮಾತುಕತೆಯ ಮೂಲಕ ಎದುರಿಸಲಾಗದ ಬಿಜೆಪಿ ನಾಯಕರು ಮತ್ತವರ ಸರ್ಕಾರ ಈಗ ಕೊಲೆಗೆ ಮುಂದಾಗಿರುವುದು ಅತ್ಯಂತ ನಾಚಿಕೆಗೇಡಿನ ಮತ್ತು ಅನಾಗರಿಕ ವರ್ತನೆ ಎಂದು ಸಂಯುಕ್ತ ಹೋರಾಟ ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು

ಪ್ರಧಾನ ಮಂತ್ರಿ ಈ ಕೂಡಲೇ ಸಚಿವ ಅರ್ಜುನ್ ಮಿಶ್ರರ ರಾಜೀನಾಮೆಯನ್ನು ಪಡೆಯಬೇಕು ಈ ಧಾರುಣ ಹತ್ಯೆಯ ಹಿಂದೆ ಸಚಿವರ ಪುತ್ರ ಮತ್ತು ಸಂಬಂಧಿಗಳು ಇದ್ದು ಅವರನ್ನು ಈ ಕೂಡಲೇ ಬಂಧಿಸಬೇಕು ಮತ್ತು ಅವರ ಮೇಲೆ ಕೊಲೆಪಾತಕ ಪ್ರಕರಣಗಳನ್ನು ದಾಖಲಿಸಬೇಕು ಈ ಕೊಲೆಗಡುಕ ಪ್ರಕರಣದಲ್ಲಿ ಕೊಲ್ಲಲ್ಪಟ್ಟ ನಾಲ್ವರು ರೈತರಿಗೆ ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರವನ್ನು ಕೇಂದ್ರ ತಕ್ಷಣವೇ ನೀಡುವಂತೆ ಮತ್ತು ಈ ದಾಳಿಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯಾಳುಗಳಾಗಿದ್ದು ಅವರಿಗೆ ಉಚಿತ ಚಿಕಿತ್ಸೆ ಮತ್ತು ಅಗತ್ಯ ಪರಿಹಾರಗಳನ್ನು ಪ್ರಕಟಿಸುವಂತೆ ಒತ್ತಾಯಿಸಿದರು

ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಲೂಟಿಯ ಪರವಾದ ಮತ್ತು ವ್ಯವಸಾಯ ಹಾಗೂ ರೈತ ವಿರೋಧಿ ಕಾಯ್ದೆಗಳ ವಿರುದ್ದ ಕಳೆದ ಒಂದೂವರೆ ವರ್ಷದಿಂದ ದೇಶದಾದ್ಯಂತ, ಮುಖ್ಯವಾಗಿ, ದೆಹಲಿ ಗಡಿಗಳಲ್ಲಿ ಕೋಟ್ಯಾಂತರ ಜನತೆ ನಡೆಸುತ್ತಿರುವ ನಿರಂತರವಾದ ಐತಿಹಾಸಿಕ ಹೋರಾಟದಿಂದ ಬೆದರಿ ಹತಾಷೆಗೊಂಡ ಕಾರ್ಪೊರೇಟ್ ಕಂಪನಿಗಳು, ಬಿಜೆಪಿ, ಸಂಘ ಪರಿವಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ದುಷ್ಠಕೂಟವು ಅಧಿಕಾರ ದುರುಪಯೋಗ ಮಾಡಿಕೊಂಡು ಹೋರಾಟವನ್ನು ಮತ್ತು ಹೋರಾಟಗಾರರನ್ನು ನಿರಂತರವಾಗಿ ಅವಹೇಳನಕಾರಿಯಾಗಿ ನಡೆಸಿಕೊಳ್ಳುತ್ತಿರುವುದನ್ನು ಇಡೀ ದೇಶವೇ ನೋಡಿದೆ ತುಚ್ಛವಾಗಿ ಮಾತನಾಡುವ ಮತ್ತು ಬಾಡಿಗೆ ರೈತರೆಂದು ಜರೆಯುವ ಉದ್ಧಟತನವನ್ನು ಬಿಜೆಪಿ ಸರ್ಕಾರಗಳು ತೋರುತ್ತಿವೆ ಮಾತ್ರವಲ್ಲಾ, ಕೊಲೆ ಪಾತಕ ದುಷ್ಕೃತ್ಯಗಳನ್ನು ಪ್ರಚೋಧಿಸುತ್ತಿವೆ ಎಂದು ಆರೋಪಿಸಿದರು

ಕಳೆದ ಕೆಲ ದಿನಗಳ ಹಿಂದೆ ಹರ್ಯಾಣ ಮುಖ್ಯಮಂತ್ರಿ ಹೋರಾಟ ನಿರತ ರೈತರ ಮೇಲೆ ಲಾಠಿ ಮುಂತಾದ ಆಯುಧಗಳಿಂದ ಧಾಳಿ ನಡೆಸುವಂತೆ ಬಿಜೆಪಿ ಹಾಗೂ ಸಂಘ ಪರಿವಾರದ ಗುಂಡಾಗಳಿಗೆ ಕರೆ ನೀಡುವ ಉದ್ಧಟತನವನ್ನು ತೋರಿದ್ದಾರೆ‌. ಹೋರಾಟ ನಿರತ ರೈತರನ್ನು ಚದುರಿಸಲು ಜಲಪಿರಂಗಿಗಳನ್ನು ಬಳಸಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹೋರಾಟ ನಿರತ ರೈತರನ್ನು ಜರೆಯುವಲ್ಲಿ ಹಿಂದೆ ಬಿದ್ದಿಲ್ಲ ಈಗ ರೈತರ ಮೇಲೆ ಕಾರು ಹರಿಸಿ ಕೊಂದ ಪ್ರಕರಣದ ರುವಾರಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಕೆಲ ದಿನಗಳ ಹಿಂದೆ ಯಾರಾದರೂ ರೈತರು ನಾನು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟದ ಪ್ರದರ್ಶನ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಮಕಿ ಹಾಕಿದ್ದರು ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.

Related Articles

Leave a Reply

Your email address will not be published.

Back to top button