Uncategorized

ಜೆಡಿಎಸ್ ಪಕ್ಷ ಸೂಟ್​ಕೇಸ್ ರಾಜಕಾರಣ ನಾನು ಹೇಳಿದಲ್ಲ, ಅವರದೇ ಪಕ್ಷದ ಸಂಸದರು ಹೇಳಿದ್ದಾರೆ: ಜಮೀರ್​ ಅಹ್ಮದ್

ಧಾರವಾಡ: ಜೆಡಿಎಸ್ ಪಕ್ಷದ ಸೂಟ ಕೇಸ್ ರಾಜಕಾರಣದ ಕುರಿತು ಈ ಹಿಂದೇ ಅವರದೇ ಪಕ್ಷದ ಹಾಲಿ ಸಂಸದರು ಆಗಿರುವ ಪ್ರಜ್ವಲ್ ರೇವಣ್ಣ ಅವರೇ ಹೇಳಿದ್ದಾರೆ. ದೇವಗೌಡರ ಕುಟುಂಬದವರೇ ಆದ ಪ್ರಜ್ವಲ್ ರೇವಣ್ಣರವರು ನಮ್ಮಲ್ಲಿ ಸೂಟ್ ಕೇಸ್ ಪದ್ದತಿ ಇದೆ, ನಮ್ಮ ಪಕ್ಷದಲ್ಲಿ ಬಕೆಟ್ ಹಿಡಿಯುವವರನ್ನು ಗುರುತ್ತಿಸಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಅದನ್ನೇ ಈಗ ನಾನು ಹೇಳಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸೂಟ್ ಕೇಸ್ ಹೇಳಿಕೆಯನ್ನು ಮಾಜಿ ಸಚಿವ ಜಮೀರ್​ ಅಹ್ಮದ್​ ಸಮರ್ಥಿಸಿಕೊಂಡರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಜೆಡಿಎಸ್ ಪಕ್ಷದಿಂದ ಎರಡು ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಯಾವ ಕಾರಣಕ್ಕಾಗಿ ನಿಲ್ಲಿಸಿದ್ದಾರೆ ಎಂಬುವುದರ ಕುರಿತು ಹೇಳಲಾಗಿದೆ. ಅದರ ಬಗ್ಗೆ ಹೆಚ್ಚು ಹೇಳುವುದು ಬೇಡ. ಆದರೆ ಪ್ರಚಾರ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸಿಂದಗಿಯಲ್ಲಿ ದೇವೆಗೌಡರು, ಕುಮಾರಸ್ವಾಮಿಯವರು ಬಂದು ಪ್ರಚಾರ ಮಾಡಿದರು. ಆದರೆ ಹಾನಗಲ್‌ನಲ್ಲಿ ಕುಮಾರಸ್ವಾಮಿಯವರು ಒಬ್ಬರೇ ಬಂದು, ಅದೂ ಒಂದೇ ದಿನ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದನ್ನು ನೋಡಿದ್ದರೆ ಸೂಟ್ ಕೇಸ್ ವೇಟ್ ಕಡಿಮೆಯಾಗಿರಬೇಕು, ಅದಕ್ಕೆ ಚುನಾವಣೆ ಪ್ರಚಾರ ಕೈ ಬಿಟ್ಟು ಕುಮಾರಸ್ವಾಮಿಯವರು ಮೈಸೂರಿಗೆ ಹೋಗಿಬಹುದು ಎಂದು ಕುಮಾರಸ್ವಾಮಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್‌ನಲ್ಲಿ ತುಂಬಾ ಜನ ಮುಸ್ಲಿಂರನ್ನು ಬಲಿಪಶು:

ಜೆಡಿಎಸ್ ಪಕ್ಷದಲ್ಲಿ ತುಂಬಾ ಜನ ಮುಸ್ಲಿಂ ನಾಯಕರನ್ನು ಬಲಿ ಮಾಡುತ್ತಾ ಬರಲಾಗುತ್ತಿದೆ. ಮುಸ್ಲಿಂ ಸಮುದಾಯದ ನಾಟೆಕಲ್ ಎಂಬವವರನ್ನು 2006ರಲ್ಲಿ ಚುನಾವಣೆಗೆ ನಿಲ್ಲಿಸಿ, ಅವರನ್ನು ಅವರೇ ಸೋಲಿಸುವ ಮೂಲಕ ಬಲಿಪಶು ಮಾಡಿದ್ದಾರೆ. 2018 ರಲ್ಲಿ ನಮ್ಮ ಪಕ್ಷದ ಗುರುತಿಸಿಕೊಂಡಿದ್ದ ಅಶ್ರಫ್‌ನನ್ನು ಕರೆದುಕೊಂಡು ಹೋಗಿ ಚುನಾವಣೆಯಲ್ಲಿ ಕ್ಯಾಂಡಿಟ್ ಮಾಡಿ ಅಲ್ಲಿಯು ಬಲಿ ಮಾಡಲಾಯಿತು. ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪ ಸಂಖ್ಯಾತರ ಮತಗಳನ್ನು ಹೊಂದಿದೆ. ಅಲ್ಲಿ 2018ರ ಚುನಾವಣೆಯಲ್ಲಿ ಅಬ್ದುಲ್ ಎಂಬ ಅಭ್ಯರ್ಥಿನ್ನು ಹಾಕುವುದರ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ತನ್ವೀರ್ ಶೇಠ್ ರನ್ನು ಸೋಲಿಸಲು ಪ್ರಯತ್ನ‌ ಮಾಡಿದರು. ಬೆಂಗಳೂರಿನ ಶಿವವಾಜಿ ನಗರದಲ್ಲಿ ರೋಷನ್ ಬೇಗ್ ಅವರನ್ನು ಸೋಲಿಸಲು ಮೂರು ಬಾರಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದರು. ಹೀಗೆ ಕುಮಾರಸ್ವಾಮಿಯವರು ಅಲ್ಪಸಂಖ್ಯಾತರನ್ನು ಬಲಿ ಪಶು ಮಾಡುತ್ತಲೇ ಬರುತ್ತಿದ್ದಾರೆ ಎಂದು ಕೀಡಿಕಾರಿದರು.

ಬಸವ ಕಲ್ಯಾಣದಲ್ಲಿ ಜೆಡಿಎಸ್‌ ಪಕ್ಷ ನೋಡಿ ಜನ ಓಟ್ ಹಾಕಿಲ್ಲ:

ಕಳೆದ ಆರು ತಿಂಗಳ ಹಿಂದಿ ಬಸವ ಕಲ್ಯಾಣ ಚುನಾವಣೆಯಲ್ಲಿ ನಾನು ಹದಿನೈದು ದಿನ ಚುನಾವಣೆ ಪ್ರಚಾರ ಮಾಡಿದ್ದೇನೆ. ಅಲ್ಲಿಯು ಕೂಡಾ ಜೆಡಿಎಸ್‌ನವರು ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಚುನಾವಣೆ ಕಣಕ್ಕೆ ಇಳಿಸಿದರು. ನಾನು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅಲ್ಪ ಸಂಖ್ಯಾತ ಮುಖಂಡರ ಸಭೆ ಮಾಡಿದೆ, ಆದರೆ ಅಲ್ಲಿಯ ಮುಖಂಡರುಗಳು ನಾವು ಜೆಡಿಎಸ್ ಪಕ್ಷ ನೋಡಿ ಓಟ್ ಹಾಕುತ್ತಿಲ್ಲ. ನಮ್ಮ ಸಮುದಾಯ ಮುಖಂಡ, ಅವರ ಒಳ್ಳೆಯ ವಿಚಾರಗಳನ್ನು ನೋಡಿ ನಾವು ಓಟ್ ಹಾಕಬೇಕಾಗುತ್ತೆ ಎಂದು ಹೇಳಿಕೊಂಡಿದ್ದರು. ಆದರಿಂದ ಬಸವ ಕಲ್ಯಾಣದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬಿದ್ದ ಮತಗಳು ಅವು ಜೆಡುಎಸ್ ಪಕ್ಷದ ಕಾರ್ಯವೈಖರಿಗೆ ಬಂದ ಮತಗಳು ಅಲ್ಲ. ಅಲ್ಪಸಂಖ್ಯಾತ ಅಭ್ಯರ್ಥಿಗೆ ಜನ ಮತ ನೀಡಿದ್ದಾರೆ ಎಂದು ಕುಟುಕಿದರು.

ಎರಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ:

ಹಾನಗಲ್ ಹಾಗೂ ಸಿಂದಗಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಮತದಾರರು ಒಲವು ತೋರಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಮಾಡಿಕೊಡುವುದಾಗಿ ಚುನಾವಣೆ ಪ್ರಚಾರದ ವೇಳೆ ಜನ ಭರವಸೆ ನೀಡುತ್ತಿದ್ದಾರೆ. ಸಿಂದಗಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಈ ಹಿಂದೆ ಪೈಪೋಟಿ ಇತ್ತು. ಆದರೆ ಈಗ ಅಲ್ಲಿ ಕಾಂಗ್ರೆಸ್ ಪರ ಜನ ಹೆಚ್ಚು ಒಲವು ಹೊಂದಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುತ್ತೇವೆ ಎನ್ನುತ್ತಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆಯವರು ಕೊರೊನಾ ಸಂದರ್ಭದಲ್ಲಿ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದನೆ ಮಾಡಿದ್ದಾರೆ. ಅದನ್ನು ಜನರು ಗುರುತ್ತಿಸುತ್ತಿದ್ದಾರೆ. ಜೊತೆಗೆ ಮಾನೆಯವರು ಸೋತ ನಂತರವು ಮನೆಯಲ್ಲಿ ಇರದೇ ಕ್ಷೇತ್ರದ ತುಂಬಾ ಓಡಾಟ ಮಾಡಿ ಜನರ ಜೊತೆಗೆ ಬೆರೆಯುವ ಕೆಲಸ ಮಾಡಿದ್ದಾರೆ. ಮಾನೆಯವರ ಕುರಿತು ಕ್ಷೇತ್ರದ ಜನತೆಯಲ್ಲಿ ಸಿಂಪತಿ ಹುಟ್ಟಕೊಂಡಿದೆ. ಹಾಗಾಗಿ ಎರಡು ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button