Uncategorized

ನಳಿನ್‌ ಕುಮಾರ್ ಕಟೀಲ್ ಹತಾಶೆಗೊಂಡು ಇಲ್ಲಸಲ್ಲದನ್ನು ಮಾತಾಡ್ತಿದ್ದಾರೆ: ಪ್ರಿಯಾಂಕ್​​​ ಖರ್ಗೆ

ಕಲಬುರಗಿ: ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಹೇಳಿಕೆ ವಿಚಾರ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ತೀರುಗೇಟು ನೀಡಿದ್ದಾರೆ. ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಟೀಲ್ ಅವರು ಹತಾಶರಾಗಿ ಬಿಟ್ಟಿದ್ದಾರೆ, ಮಾಧ್ಯಮದವರು ಕಟೀಲ್ ಸುದ್ದಿಯನ್ನ ಹೆಚ್ಚು ಬಿತ್ತರ ಮಾಡ್ತಿಲ್ಲ. ಬಿಜೆಪಿ ಅಧ್ಯಕ್ಷರು ಆದ್ರು ಪಕ್ಷದಲ್ಲಿ ಮಾಧ್ಯಮದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು.

ಯಡಿಯೂರಪ್ಪ , ಬೊಮ್ಮಾಯಿ, ಸೈಡ್ ಲೈನ್ ಮಾಡಿದ್ದಾರೆ. ಕಟೀಲ್ ಗಿಂತಲು ಯತ್ನಾಳ ಸುದ್ದಿ ಹೆಚ್ಚು ಬಿತ್ತರವಾಗ್ತಿದೆ. ಸುದ್ದಿ ಬಿತ್ತರ ಆಗದೆ ಇರೋದ್ರಿಂದ ವ್ಯಕ್ತಿ ಹತಾಶರಾದ್ರೆ ದಾರಿ ತಪ್ಪುವುದು ಸಹಜ ದಾರಿ ತಪ್ಪಿದಾಗ ಕೆಲವು ಜನ ಮಧ್ಯಪಾನ , ಡ್ರಗ್ಸ್ ಸೇವನೆ ಮಾಡ್ತಾರೆ ಇನ್ನೂ ಕೆಲವರು ಇಂತಹ ರೀತಿಯಲ್ಲಿ ಮಾತಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇವರು ಮಾತಾಡೋದನ್ನ ನೋಡಿದ್ರೆ ನನಗೆ ಅನುಮಾನ ಬರುತ್ತೆ. ಬಿಜೆಪಿ ಅಧಿಕಾರಕ್ಕೆ ಬಂದ‌ ಮೇಲೆ ಡ್ರಗ್ಸ್ ಸೇವನೆ ಹೆಚ್ಚಾಗ್ತಿದೆ. ದೇಶ್ಯಾದ್ಯಂತ ಬಿಜೆಪಿ ನಾಯಕರೆ ಡ್ರಗ್ಸ್ ಸೇವನೆಯಲ್ಲೆ ಬಂಧಿತರಾಗಿದ್ದಾರೆ. ಕಟೀಲ್ ನಿಮಗೆ ನಿಜವಾಗಲು ಶಕ್ತಿ ಇದ್ದರೆ ರಾಹುಲ್ ಗಾಂಧಿಯನ್ನ ಪ್ರಶ್ನೆ ಮಾಡಬೇಡಿ. ಅಮಿತ್ ಷಾ ಅವರಿಗೆ ಕೇಳಿ, ಬೊಮ್ಮಾಯಿ ಸರ್ಕಾರಕ್ಕೆ ಕೇಳಿ. ಕಳೆದ ತಿಂಗಳು ಗುಜರಾತ್ ನಲ್ಲಿ ಅದಾನಿಗೆ ಸೇರಿದ ಖಾಸಗಿ ಬಂದರ್ ನಲ್ಲಿ 3 ಸಾವಿರ ಕೆಜೆ ಡ್ರಗ್ ಸಿಕ್ಕಿದೆ. 25 ಸಾವಿರ ಕೆ ಜೆ ಹೆರಾಯಿನ್ ಸಿಕ್ಕಿದೆ, ಇದು ಪಾಕಿಸ್ತಾನ್ ಮತ್ತು ಅಫಘಾನಿಸ್ತಾನದಿಂದ ಬರ್ತಿದೆ. ಯುವಕರಿಗೆ ಉದ್ಯೋಗ ಕೋಡಿ ಅಂದ್ರೆ ನಶೆ ಕೊಡ್ತಿದ್ದಾರೆ. ಮೋಹನ್ ಭಾಗವತ್ ಕೂಡ ಡ್ರಗ್ ಹಾವಳಿ ಹೆಚ್ಚಾಗ್ತಿದೆ ಅಂತಾ ಹೇಳಿದ್ದಾರೆ. ಕಳೆದ ಏಳು ವರ್ಷಗಳಿಂದ ಇವರದ್ದೆ ಸರ್ಕಾರ ಆಳ್ವಿಕೆಯಲ್ಲಿದೆ ಅಲ್ಲ ಕಡಿವಾಣ ಹಾಕೋಕೆ ಆಗ್ತಿಲ್ಲ ಎಂದು ಆರೋಪಿಸಿದ್ದಾರೆ.

ಪುಕ್ಸಟ್ಟೆ ಪ್ರಚಾರಕ್ಕೊಸ್ಕರ ವ್ಯೆಯಕ್ತಿಕವಾಗಿ ಮಾತಾಡಬೇಡಿ:

ಮಾನಸಿಕ ಅಸ್ವಸ್ಥರಾಗಿದ್ದಾರೆ ನಮ್ಮಲ್ಲೆ ಡಾಕ್ಟರ್ ಇದ್ದಾರೆ ಚಿಕಿತ್ಸೆ ಕೊಡಿಸುತ್ತೇವೆ. ಮಾನಸಿಕವಾಗಿ ಅಸ್ವಸ್ಥತೆಯ ಸಮಸ್ಯೆ ಇದ್ದರೆ ಮುಚ್ಚಿಡಬೇಡಿ ಇದರಿಂದ ಏನು ಸಮಸ್ಯೆ ಇಲ್ಲ. ಆ ಸಮಸ್ಯೆ ಇದ್ರೆ ನಾವು ಸಹಕಾರ ಕೊಟ್ಟು ನಿಮಗೆ ಚಿಕಿತ್ಸೆ ಕೊಡುತ್ತೇವೆ. ನಮ್ಮ ನಾಯಕರ ಬಗ್ಗೆ ಮಾತಾಡಿದ್ರೆ ನಾವು ನಿಮ್ಮ ಲೀಡರ್ ಬಗ್ಗೆ ಮಾತಾಡಬೇಕಾಗುತ್ತೆ. ನೀವು ನಮ್ಮ ನಾಯಕರ ಬಗ್ಗೆ ಸಾರ್ವಜನಿಕವಾಗಿ ಹೇಳುವುದಕ್ಕೆ ರೇಡಿಯಿದ್ದರೆ. ನಿಮ್ಮ ಲೀಡರ್ ಗಳ ಬಗ್ಗೆ ನಾವು ಸಾರ್ವಜನಿಕವಾಗಿ ಹೇಳೋದನ್ನ ಕೇಳೊಕೆ ರೆಡಿ ಇರಬೇಕು ಪುಕ್ಸಟ್ಟೆ ಪ್ರಚಾರಕ್ಕೊಸ್ಕರ ವ್ಯೆಯಕ್ತಿಕವಾಗಿ ಮಾತಾಡಬೇಡಿ ಎಂದು ಬಿಜೆಪಿ ನಾಯಕರಿಗೆ ಎಚ್ಚರ ನೀಡಿದ್ದಾರೆ.

ಮೋದಿ ಹೆಬ್ಬೆಟ್ಟು ಗಿರಾಕಿ ಸಮರ್ಥನೆ

ಪ್ರಧಾನಿ ನರೇಂದ್ರ ಮೋದಿ ಹೆಬ್ಬೆಟ್ಟು ಗಿರಾಕಿ ವಿಚಾರವನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ, ಹೆಬ್ಬೆಟ್ಟು ಅಸಂವಿಧಾನಿಕ ಪದವಂತು ಅಲ್ಲ. ಮೋದಿ ಏನ್ ಓದಿದ್ದಾರೆ ಅನ್ನೋದು ಆರ್ ಟಿ ಐ ನಲ್ಲೆ ಕೊಟ್ಟಿಲ್ಲ. ಮೋದಿ ಕ್ಲಾಸ್ ಮೇಟ್ ಯಾರು ಏನು ಅನ್ನೋದು ಸಹ ಗೊತ್ತಿಲ್ಲ ಎಂದಿದ್ದಾರೆ.

Related Articles

Leave a Reply

Your email address will not be published.

Back to top button