ಒಂದಲ್ಲ, ಒಂದು ಲಕ್ಷ ಸಲ ‘ಜೈ ಮಹಾರಾಷ್ಟ್ರ’ಹೇಳ್ತೀವಿ: ಬೆಳಗಾವಿ ಮಾಜಿ ಮೇಯರ್ ಸರಿತಾ ಸವಾಲು
ಬೆಳಗಾವಿ: ಒಂದಲ್ಲ, ಒಂದು ಲಕ್ಷ ಸಲ ನಾವು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುತ್ತೇವೆ. ನಾವು ಸಾಯವವರೆಗೂ ಜೈ ಮಹಾರಾಷ್ಟ್ರ ಎಂದು ಹೋರಾಟ ಮಾಡುತ್ತೇವೆ ಎಂದು ಬೆಳಗಾವಿ ಮಾಜಿ ಮೇಯರ್ ಸರಿತಾ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದರ
ನಗರದ ಮರಾಠಾ ಮಂದಿರ ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
2017ರಲ್ಲಿ ನಾನು ಮೇಯರ್ ಆಗಿದ್ದಾಗ ಜೈ ಮಹಾರಾಷ್ಟ್ರ ಎಂದಿದ್ದಕ್ಕೆ ಕೇಸು ಹಾಕಿದ್ದರು. ಈಗ ಆ ಕೇಸು ರೀ ಓಪನ್ ಮಾಡಿ ಹೆದರಿಸುತ್ತಿದ್ದಾರೆ. ಎಷ್ಟೇ ಕೇಸು ಹಾಕಿದರೂ ನಾವು ಯಾವುದಕ್ಕೂ ಹೆದರುವುದಿಲ್ಲ. ಇಂಥ ಅನೇಕ ಕೇಸುಗಳು ಎಂಇಎಸ್ ನಾಯಕರ ಮೇಲಿವೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದರು
ರಾಜ್ಯದಲ್ಲಿ ಹಿಂದುತ್ವ ಪಕ್ಷ ಎಂದು ಹೇಳಿಕೊಳ್ಳುವವರು ಮಹಾನಗರ ಪಾಲಿಕೆ ಮೇಲೆ ಭಗವತ್ ಧ್ವಜ ಹಾರಿಸಬೇಕು. ನೂತನ ಪಾಲಿಕೆ ಸದಸ್ಯರು ಹಾಗೂ ಶಾಸಕರ ರಕ್ತದಲ್ಲಿ ಹಿಂದುತ್ವ ಇದ್ದಿದ್ದರೆ ಭಗವತ್ ಧ್ವಜ ಹಾರಿಸಲಿ. ನಿಮ್ಮ ಶಾಸಕತ್ವ ಹಾಗೂ ಮರಾಠಿ ಪ್ರೀತಿ ಆಗ ಗೊತ್ತಾಗಲಿದೆ. ಹಿಂದುತ್ವ ಪಕ್ಷದಲ್ಲಿ ಇರುವವರು ಹಿಂದೂ ಪ್ರೇಮ ತೋರಿಸಲಿ ಎಂದು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.