Uncategorized

ಉಪ ಚುನಾವಣೆ ಸೋಲಿನ ಭೀತಿಯಲ್ಲಿ ಕಾಂಗ್ರೆಸ್‌ನವರು ಅಪಪ್ರಚಾರದ ಮೊರೆ ಹೋಗುತ್ತಿದ್ದಾರೆ: ಜಗದೀಶ್ ಶೆಟ್ಟರ್

ಧಾರವಾಡ : ಉದಾಸಿ ಅವರು ಯಾವ ಸಂದರ್ಭದಲ್ಲಿಯೂ ಸಚಿವ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ. ನಾವು ಅವರು ತುಂಬಾ ಆತ್ಮೀಯರಾಗಿದ್ದವರು, ಅವರೆಂದೂ ಸಚಿವ ಸ್ಥಾನದ ಬಗ್ಗೆ ಮಾತಾಡಲಿಲ್ಲ. ಶಾಸಕರಾಗಿ, ಹಿರಿಯರಾಗಿ ಅವರು ಕೆಲಸ ಮಾಡುತ್ತಿದ್ದರು. ಈಗ ಉಪ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣೆಗಳಲ್ಲಿ ಅಪಪ್ರಚಾರ ಮಾಡುವುದು, ಅವರ ಸಂಸ್ಕೃತಿಯಾಗಿದೆ ಎಂದು ಡಿಕೆಶಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಹಾನಗಲ್ ನಲ್ಲಿ ಉಪ ಚುನಾವಣೆ ಪ್ರಚಾರಕ್ಕೆ ಬಂದ ಸಿದ್ದರಾಮಯ್ಯನವರು ಉದಾಸಿ ಭ್ರಷ್ಟಾಚಾರ ಮಾಡಿದರು ಎನ್ನುತ್ತಾರೆ. ಇನ್ನೊಬ್ಬರು ಡಿಕೆಶಿ ಅವರು ಉದಾಸಿಯವರನ್ನು ಮಂತ್ರಿ‌ ಮಾಡಿಲ್ಲ ಎಂದು ಹೇಳುತ್ತಾರೆ. ಇದೂ ಕಾಂಗ್ರೆಸ್ ನಾಯಕರಿಗೆ ಸೋಲಿನ ಭೀತಿಯಲ್ಲಿರುವುದು ಎತ್ತಿ ತೋರಿಸುತ್ತಿದೆ. ಹೀಗೆ ನಮ್ಮ ಪಕ್ಷದ ಮುಖಂಡರ ಕುರಿತು ಕಾಂಗ್ರೆಸ್ ನಾಯಕರ ಅಪ ಪ್ರಚಾರ ಸರಿಯಲ್ಲ. ಅಪ್ರಚಾರ ಮಾಡುವುದನ್ನು ಬಿಟ್ಟು, ಸರಿಯಾದ ಮಾರ್ಗದಲ್ಲಿ ಚುನಾವಣೆಯನ್ನು ಕಾಂಗ್ರೆಸ್ ನಾಯಕರು ಮುಂದಾಗಬೇಕು ಎಂದು ಡಿಕೆಶಿ ಹಾಗೂ ಸಿದ್ದಾರಾಮಯ್ಯನವರಿಗೆ ತಿರುಗೇಟು ನೀಡಿದರು.

ಪ್ರತಿಪಕ್ಷದವರಿಗೆ ಭ್ರಷ್ಟಾಚಾರ ಕುರಿತು ಮಾತನಾಡುವ ನೈತಿಕತೆ ಇಲ್ಲ: ಇದರ

ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಭ್ರಷ್ಟ ಪಕ್ಷಗಳಾಗಿದ್ದು, ಪ್ರಾದೇಶಿಕ ಪಕ್ಷಕ್ಕೆ ಮತದಾರ ಅವಕಾಶ ನೀಡುತ್ತಾನೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಮಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವರು, ಕುಮಾರಸ್ವಾಮಿಯಾಗಲಿ ಮತ್ತೊಬ್ಬರಾಗಲಿ ಇಂದು ಭ್ರಷ್ಟಾಚಾರ ಕುರಿತು ಮಾತನಾಡುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಈ ಹಿಂದೆ ಇವರು ಅಧಿಕಾರದಲ್ಲಿದ್ದಾಗ ಯಾವ ರೀತಿಯ ಭ್ರಷ್ಟಾಚಾರಗಳು ನಡೆದಿವೆ ಎಂಬುವುದು ಈಡಿ ರಾಜ್ಯದ ಜನತೆಗೆ ತಿಳಿದಿದೆ. ಅಲ್ಲದೆ ನಮ್ಮ ಪಕ್ಷದ ಮೇಲೆ ಭ್ರಷ್ಟಾಚಾರ ಆರೋಪ‌ ಮಾಡುವವರ ಮೇಲೆಯೇ ಈ ಹಿಂದಿನಿಂದಲೂ ಭ್ರಷ್ಟಾಚಾರ ಆರೋಪಗಳಿ ಈಗಲೂ ಕೇಳಿ ಬರುತ್ತಲ್ಲೇ ಇವೆ.‌ ಹಾಗಾಗಿ ಈಗ ಕುಮಾರಸ್ವಾಮಿ ಸೇರಿದಂತೆ ಮತ್ತೊಬ್ಬರು ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ಕೀಡಿಕಾರಿದರು.

ಆರ್​​ಎಸ್​​ಎಸ್​ ಬಗ್ಗೆ ಟೀಕೆ ಮಾಡುವ ಮೊದಲ ಸಂಘಟನೆ ಕುರಿತು ಇರುವ ಪುಸ್ತಕ ಓದಿ ತಿಳಿದುಕೊಳ್ಳಲಿ:

ಇಂದು ಹಲವು ನಾಯಕರು ಆರ್ ಎಸ್ ಎಸ್ ಸಂಘಟನೆಯ ಕುರಿತು ಮಾತಾಡುತ್ತಿದ್ದಾರೆ. ಸಂಘಟನೆಯ ಕುರಿತು ಹಲವು ಹಿರಿಯರು ಬರೆದಿರು ಪುಸ್ತಕಗಲಿವೆ. ಆರ್ ಎಸ್ ಎಸ್ ಒಳ್ಳೆಯ ವಿಚಾರ, ಮಾಡುವ ಕೆಲಸ ಹಾಗೂ ಬೆಳೆದ ಬಂದ ರೀತಿಯ ಕುರಿತು ಸವಿಸ್ತಾರವಾಗಿ ಹಲವು ಪುಸ್ತಕಗಳಿವೆ. ಅವುಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕು ವಾಗ್ದಾಳಿ ನಡೆಸಿದರು.

Related Articles

Leave a Reply

Your email address will not be published.

Back to top button