Uncategorized

ಅರಣ್ಯ ಕಾಯ್ದೆ ತಿದ್ದುಪಡಿಯಿಂದ ಮಲೆನಾಡಿಗೆ ಗಂಡಾಂತರ: ಕೆ ಎಲ್ ಅಶೋಕ್

ಚಿಕ್ಕಮಗಳೂರು: ಉದ್ದೇಶಿತ ಅರಣ್ಯ ಕಾಯ್ದೆ ತಿದ್ದುಪಡಿ ಮಲೆನಾಡಿಗೆ ದೊಡ್ಡ ಗಂಡಾಂತರ ತಂದೊಡ್ಡಲಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ಮುಖಂಡ ಕೆ ಎಲ್ ಅಶೋಕ್ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 1980ರ ಮೂಲ ಅರಣ್ಯ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದರೆ ಸಾಮಾನ್ಯ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಕಾಯ್ದೆಯ ಪ್ರತೀಕೂಲ ಪರಿಣಾಮ ಎಲ್ಲಾ ವರ್ಗದ ಜನರನ್ನು ಕಾಡಲಿದೆ. ಮಲೆನಾಡಿನಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಅಪಾಯವಿದೆ . ಹೀಗಾಗಿ ಕಾಯ್ದೆ ವಿರುದ್ಧ ಜನರು ಒಗ್ಗಟ್ಟಿನಿಂದ ಕಾನೂನಾತ್ಮಕ ಮತ್ತು ಹೋರಾಟದ ಮೂಲಕ ವಿರೋಧ ವ್ಯಕ್ತಪಡಿಸಿಬೇಕಾಗಿದೆ ಎಂದರು.

ಇದಲ್ಲದೆ ವಿದ್ಯುತ್ ಖಾಸಗೀಕರಣ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧವೂ ಸಂಘಟಿತ ಹೋರಾಟವನ್ನು ಕೈಗೊಳ್ಳುವುದು. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಐತಿಹಾಸಿಕ ಚಳವಳಿ ಮುಂದುವರಿದ ಭಾಗವಾಗಿ ನವೆಂಬರ್ 26ಕ್ಕೆ ದೆಹಲಿಯಲ್ಲಿ ಬೃಹತ್ ಜಾಥಾ ನಡೆಯಲಿದೆ. ಹಳ್ಳಿಯಿಂದ ದಿಲ್ಲಿಗೆ ಘೋಷವಾಕ್ಯದೊಂದಿಗೆ ನ.12ರಿಂದ 20ರವರೆಗೆ ರೈತ ಪರ ಅಭಿಯಾನ, 22 ರಿಂದ ಯುವ ಅಭಿಯಾನ ನಡೆಯಲಿದೆ ಎಂದು ಅಶೋಕ್ ತಿಳಿಸಿದರು.

ಗೌಸ್ ಮೊಹಿಯುದ್ದೀನ್ ಮಾತನಾಡಿ, ಜಿಲ್ಲೆಯ ದೇವರಮನೆಯಲ್ಲಿ ಅವ್ಯಾಹತವಾಗಿ ಕಾಡು ನಾಶವಾಗುತ್ತಿದೆ. ಅನುಮತಿ ಇಲ್ಲದೆ ರೆಸಾರ್ಟ್ ಗಳನ್ನು ನಿರ್ಮಿಸುತ್ತಿದ್ದಾರೆ. ಅರಣ್ಯಾಧಿಕಾರಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Related Articles

Leave a Reply

Your email address will not be published.

Back to top button