Uncategorized

ತಂಗಿಯನ್ನ ಪ್ರೀತಿ ಮಾಡಿದ ಯುವಕನ‌ ಕೊಲೆ ಮಾಡಿದ ಆರೋಪಿಗಳ ಬಂಧನ

ಕಲಬುರಗಿ : ಅಕ್ಟೋಬರ್ 27 ರಂದು ಕಲಬುರಗಿ ಹೊರವಲಯದ ಸೇಡಂ ರಸ್ತೆಯ ಕಾಳನೂರು ದಾಭಾ ಬಳಿ ಫಿಲ್ಟರ್ ಬೆಡ್ ನಿವಾಸಿ 21 ವರ್ಷದ ಆಕಾಶ್ ಎಂಬಾತನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಠಾಣೆ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಶ್ರೀನಿಧಿ, ಈತನ ಸಹೋದರ ನಿಖಿಲ್, ಬಸವರಾಜ್ ಹಾಗೂ ವಿಜಯಕುಮಾರ್, ಪ್ರದೀಪ್ ಐವರನ್ನ ಪೊಲೀಸರು ಬಂಧಿಸಿದ್ದಾರೆ. ಖರ್ಗೆ ಸರ್ಕಲ್ ಬಳಿ ಗ್ಯಾರೇಜ್‌ನಲ್ಲಿ ಮ್ಯಾಕಾನಿಕ್ ಕೆಲಸ ಮಾಡ್ತಿದ್ದ ಕೊಲೆಯಾದ ಆಕಾಶ್, ಆರೋಪಿ ಶ್ರೀನಿಧಿಯ ಸಹೋದರಿಯನ್ನ ಪ್ರೀತಿಸುತ್ತಿದ್ದ, ಅಲ್ಲದೇ ಆಕೆಯನ್ನ ಕರೆದುಕೊಂಡು ಹೋಗಿ ಪುನಃ ಮನೆಗೆ ಕರೆದುಕೊಂಡು ತಂದು ಬಿಟ್ಟಿದ್ದ..

ಇದರಿಂದ ಕೆಂಡಮಂಡಲವಾಗಿದ್ದ ಶ್ರೀನಿಧಿ, 27 ರಂದು ಸಂಜೆ ಗ್ಯಾರೇಜ್‌ನಲ್ಲಿದ್ದ ಆಕಾಶ್‌ನನ್ನ ಬಲವಂತವಾಗಿ ಬೈಕ್ ಮೇಲೆ ಕಾಳನೂರು ದಾಭಾ ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು.

ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಲೆ ಬೀಸಿದ್ದರು.. ಬಂಧಿತರಿಂದ ಚಾಕು, ಬೈಕ್, ಆಟೋ ವಶಪಡಿಸಿಕೊಂಡು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related Articles

Leave a Reply

Your email address will not be published.

Back to top button